ಇಸ್ಲಾಮಾಬಾದ್,ಅ.24- ಪಾಕಿಸ್ತಾನಕ್ಕೆ 300 ಕೋಟಿ ಡಾಲರ್ ಸಾಲದ ನೆರವು ನೀಡಲು ಸೌದಿ ಅರೇಬಿಯಾ ಸಮ್ಮತಿಸಿದ್ದು, ಈ ವಿಷಯವನ್ನು ಪಾಕ್ ಪ್ರಧಾನಿ ದೃಢೀಕರಿಸಿದ್ದಾರೆ.
ರಿಯಾದ್‍ನಲ್ಲಿ ಸೌದಿ ದೊರೆ ಸಲ್ಮಾನ್ ಅವರನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ ಸಂದರ್ಭದಲ್ಲಿ 300 ಕೋಟಿ ಡಾಲರ್ ಮೌಲ್ಯದ ಇಂಧನವನ್ನು ಪಾಕ್‍ಗೆ ಪೂರೈಸಲು ಸೌದಿ ಅರೇಬಿಯಾದ ರಾಜ ಸಮ್ಮತಿಸಿರುವುದಾಗಿ ತಿಳಿಸಿದ್ದಾರೆ.
ಉಭಯ ದೇಶಗಳ ನಡುವೆ ಸಹಕಾರ ವೃದ್ಧಿ ಸಂಬಂಧ ಮಾತುಕತೆ ನಡೆಯಿತು.