ನವೆಂಬರ್ 1ರಿಂದ ಮುಂಗಡವಲ್ಲದ ರೈಲ್ವೆ ಟಿಕೆಟ್ ಖರೀದಿಸಲು ಆನ್ಲೈನ್ ವ್ಯವಸ್ಥೆ

ನವದೆಹಲಿ,ಅ.24- ಮುಂಗಡವಲ್ಲದ ರೈಲ್ವೆ ಟಿಕೆಟ್‍ಗಳನ್ನು ಆನ್‍ಲೈನ್‍ನಲ್ಲೇ ಖರೀದಿಸುವ ವ್ಯವಸ್ಥೆಯನ್ನು ನವೆಂಬರ್ 1ರಿಂದ ದೇಶಾದ್ಯಂತ ಜಾರಿ ಮಾಡಲಾಗುತ್ತಿದೆ.

ಭಾರತೀಯ ರೈಲ್ವೆ ಇಲಾಖೆಯ ಯುಟಿಎಸ್ ಮೊಬೈಲ್ ಆಪ್ ಮೂಲಕ ಪ್ರಯಾಣಿಕರು ಆನ್ ಲೈನ್‍ನಲ್ಲಿ ಮುಂಗಡವಲ್ಲದ ಟಿಕೆಟ್ ಖರೀದಿಸಬಹುದಾಗಿದೆ.
ನಾಲ್ಕು ವರ್ಷಗಳ ಹಿಂದೆಯೇ ಜಾರಿಗೊಂಡಿದ್ದ ಈ ಯೋಜನೆಯನ್ನು ರೈಲ್ವೆ ಇಲಾಖೆಯು ನವೆಂಬರ್ 1ರಿಂದ ದೇಶದೆಲ್ಲೆಡೆ ಲಭಿಸುವಂತೆ ಕ್ರಮಕೈಗೊಂಡಿದೆ.

4 ವರ್ಷಗಳ ಹಿಂದೆ ಮೊದಲಿಗೆ ಮುಂಬೈನಲ್ಲಿ ಪ್ರಾರಂಭವಾಗಿ ಬಳಿಕ ದೆಹಲಿ-ಪಾಲ್ವಾಲ್ ಹಾಗೂ ಚೆನ್ನೈನಲ್ಲೂ ಜಾರಿಗೆ ಬಂತು. ಇನ್ನು ಮುಂದೆ ರೈಲ್ವೆಯ ಎಲ್ಲ ವಲಯಗಳಲ್ಲೂ ಈ ವ್ಯವಸ್ಥೆ ಲಭಿಸಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಈ ಆಪ್ ಮೂಲಕ ದೂರ ಪ್ರಯಾಣದ ಟಿಕೆಟ್ ಕೂಡ ಖರೀದಿಸಬಹುದಾಗಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಯುಟಿಎಸ್ ಮೊಬೈಲ್ ಆಪ್‍ಗೆ 45 ಲಕ್ಷ ಅಧಿಕೃತ ಬಳಕೆದಾರರಿದ್ದು, ಪ್ರತಿನಿತ್ಯ ಸರಾಸರಿ 87 ಸಾವಿರ ಟಿಕೆಟ್ ಇದರ ಮೂಲಕ ಖರೀದಿ ಆಗುತ್ತಿದೆ. ಒಮ್ಮೆಗೆ ನಾಲ್ಕು ಟಿಕೆಟ್‍ಗಳನ್ನಷ್ಟೇ ಖರೀದಿಸಬಹುದು ಎಂದು ಇಲಾಖೆ ಹೇಳಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ