ಲಂಡನ್, ಅ.24- ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ಮಾರಕವಾಗಿ ಇರಿದು ಕೊಂದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳಿಗೆ ಲಂಡನ್ ನ್ಯಾಯಾಲಯವೊಂದು ಒಟ್ಟು 40 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಪಶ್ಚಿಮ ಲಂಡನ್ನ ಸೌತ್ಹಾಲ್ ಉಪನಗರಿಯಲ್ಲಿ ಬಲ್ಬೀರ್ ಜೋಹಾಲ್(45) ಎಂಬುವರ ಮೇಲೆ ಮಾರ್ಚ್ನಲ್ಲಿ ಇಬ್ಬರು ದುಷ್ಕರ್ಮಿಗಳು ದಾಳಿ ನಡೆಸಿ ಚೂರಿಯಿಂದ ಇರಿದಿದ್ದರು. ತೀವ್ರ ರಕ್ತಸ್ರಾವದಿಂದ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ನಂತರ ತನಿಖೆ ತೀವ್ರಗೊಳಿಸಿದ ಲಂಡನ್ ಪೆÇಲೀಸರು ಹಸನ್ ಮಹಮದ್(24) ಹಾಗೂ ಯಾಸಿನ್ ಯೂಸುಫ್(21) ಎಂಬುವರನ್ನು ಬಂಧಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಓಲ್ಡ್ ಬೈಲೇ ಕೋರ್ಟ್ ಮಹಮದ್ಗೆ 26 ವರ್ಷ ಹಾಗೂ ಯೂಸುಫ್ಗೆ 14 ವರ್ಷ ಸೆರೆವಾಸ ವಿಧಿಸಿದೆ.