
ಜೌನ್‍ಪುರ್, ಅ.24- ವಿದ್ಯುತ್ ಸ್ಪರ್ಶದಿಂದ ಮೂವರು ಕಾರ್ಮಿಕರು ಸುಟ್ಟು ಕರಕಲಾಗಿರುವ ದಾರುಣ ಘಟನೆ ಉತ್ತರ ಪ್ರದೇಶದ ಜೌನ್‍ಪುರ್ ಜಿಲ್ಲೆಯ ವಿಷ್ಣುಪುರ್ ಗ್ರಾಮದಲ್ಲಿ ಸಂಭವಿಸಿದೆ.
ಕೈ ಪಂಪ್‍ನ ಬೈರಿಗೆ ಕೊಳವೆಯನ್ನು ನಿನ್ನೆ ದುರಸ್ತಿಗೊಳಿಸುತ್ತಿದ್ದಾಗ ಹೈಟೆನ್ಷನ್ ವಿದ್ಯುತ್ ತಂತಿಯೊಂದಿಗೆ ಸಂಪರ್ಕವಾಗಿ ಮೂವರು ಕಾರ್ಮಿಕರು ಮೃತಪಟ್ಟು, ಕೆಲವರು ಗಾಯಗೊಂಡಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಸುಭಾಷ್ ಚಂದ್ರ ಸಾಹು(65), ಕುಲದೀಪ್ ಯಾದವ್(18) ಹಾಗೂ ಅಮರ್‍ನಾಥ್ ಯಾದವ್(40) ಮೃತಪಟ್ಟ ದುರ್ದೈವಿಗಳು.
ದುರಂತದ ವೇಳೆ ಹತ್ತಿರದಲ್ಲೇ ಇದ್ದ ಕೆಲ ಗ್ರಾಮಸ್ಥರು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಿದರೂ, ತೀವ್ರ ಸುಟ್ಟ ಗಾಯಗಳಿಂದ ಕೊನೆಯುಸಿರೆಳೆದರು.