ನಗರದಲ್ಲಿ ಕನ್ನಡ ಭಾಷೆ ಮಾಯ, ವಾಟಾಳ್ ನಾಗರಾಜ್

ಬೆಂಗಳೂರು, ಅ.24-ನಗರದಲ್ಲಿ ಕನ್ನಡ ಭಾಷೆ ಮಾಯವಾಗುತ್ತಿದೆ. ನಮ್ಮ ಭಾಷೆ ಉಳಿಸಲು ಹೋರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಕನ್ನಡ ಸಂಘದ ವತಿಯಿಂದ ಇಂದು ಕನ್ನಡ ಸಾಹಿತ್ಯ ಪರಿಷತ್‍ನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ನವೆಂಬರ್ ಮೊದಲನೇ ವಾರದಲ್ಲಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಚಳವಳಿ ಮುಖಾಂತರ ಆಂಗ್ಲ ಫಲಕಗಳನ್ನು ಕಿತ್ತು ಹಾಕಲಾಗುವುದು ಎಂದು ಹೇಳಿದರು.

ನಗರದಲ್ಲಿ ತಮಿಳರು, ಮಲಯಾಳಿ, ಗುಜರಾತಿ ಭಾಷೆಗಳ ಪ್ರಾಬಲ್ಯ ಹೆಚ್ಚಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ವಾಟಾಳ್, ನಮ್ಮ ಚುನಾಯಿತ ಪ್ರತಿನಿಧಿಗಳಿಗೆ ಕನ್ನಡ ನಾಡು, ನುಡಿ, ಭಾಷೆ ಬಗ್ಗೆ ಎಳ್ಳಷ್ಟೂ ಪರಿಚಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾರಂಭ ಉದ್ಘಾಟಿಸಿದ ಹಿರಿಯ ಸಾಹಿತಿ ಪೆÇ್ರ.ಚಂದ್ರಶೇಖರ ಪಾಟೀಲ ಅವರು ಮಾತನಾಡಿ, ನಾಡಿನ ಗಣ್ಯ ಮಹನೀಯರ ಹೆಸರಿನಲ್ಲಿ ಪ್ರಶಸ್ತಿ ಕೊಡಮಾಡುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು.

ಬಿಬಿಎಂಪಿ ನೌಕರರ ಕನ್ನಡ ಸಂಘ ನಮ್ಮ ನಾಡು, ನುಡಿ, ಭಾಷೆ ಉಳಿವಿಗೆ ಉತ್ತಮ ಯೋಜನೆ ರೂಪಿಸಲಿ ಎಂದರು.
ನೌಕರರ ಕನ್ನಡ ಸಂಘದ ಪ್ರಧಾನಕಾರ್ಯದರ್ಶಿ ಅಮೃತರಾಜ್ ಪಾಲಿಕೆಗೆ ಎರವಲು ಸೇವೆ ಮೇಲೆ ಬರುವ ಅಧಿಕಾರಿಗಳು ಕನ್ನಡ ಭಾಷೆ ಬಳಕೆ ಮಾಡುತ್ತಿಲ್ಲ. ಇದರಿಂದ ಬಿಬಿಎಂಪಿಯಲ್ಲಿ ಕನ್ನಡ ಬಳಕೆ ಕಡಿಮೆಯಾಗುತ್ತಿದೆ. ಇದರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಕನ್ನಡ ಸಂಘದ ಎದುರು ಮೇಯರ್ ಮುತ್ತಣ್ಣ ಶೈಲಿಯ ಮೇರುನಟ ಡಾ.ರಾಜ್‍ಕುಮಾರ್ ಅವರ ಪ್ರತಿಮೆ ಅನಾವರಣ ಮಾಡಲಾಗುವುದು ಎಂದು ಅವರು ತಿಳಿಸಿದರು.

ಗಾಂಧಿವಾದಿ ಜಿ.ನಾರಾಯಣ ಪ್ರಶಸ್ತಿಯನ್ನು ಮಾಜಿ ಮೇಯರ್ ಕೆ.ಲಕ್ಕಣ್ಣ ಅವರಿಗೆ, ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಪ್ರಶಸ್ತಿಯನ್ನು ಟಿ.ಪಿ.ಪ್ರಸನ್ನಕುಮಾರ್, ಬಿ.ಎನ್.ಅಚ್ಚಪ್ಪ ಅವರಿಗೆ, ಐಪಿಡಿ ಸಾಲಪ್ಪ ಪ್ರಶಸ್ತಿಯನ್ನು ಕೃಷ್ಣ ಅವರಿಗೆ ನೀಡಿ ಸನ್ಮಾನಿಸಲಾಯಿತು.

ಬಿಬಿಎಂಪಿ ಕನ್ನಡ ಸಂಘದ ಪದಾಧಿಕಾರಿಗಳಾದ ನಲ್ಲಪ್ಪ, ಗಂಗಾಧರ್, ಮಂಜೇಗೌಡರು, ಸಂತೋಷ್‍ಕುಮಾರ್ ನಾಯಕ್,ಕೆ.ಜಿ.ರವಿ, ಶಾಂತನಂದ, ಎಚ್.ನಂಜಪ್ಪ, ಸಂಧ್ಯಾ, ಮಹಾದೇವಿ ಸಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ