ಚಂಡಮಾರುತದಂತೆ ನುಗುತ್ತಿದೆ ಮಹಾಮಾರಿ… ಹಂದಿಜ್ವರಕ್ಕೆ 542 ಮಂದಿ ಬಲಿ…

Closeup of Syringe on H1N1 Word

ನವದೆಹಲಿ: ಚಂಡಮಾರುತದಂತೆ ನುಗ್ಗುತ್ತಿರುವ ಸ್ವೈನ್​ ಫ್ಲೂ (ಹಂದಿಜ್ವರ)ಕ್ಕೆ ಈ ವರ್ಷ 542 ಮಂದಿ ಬಲಿಯಾಗಿದ್ದಾರೆ ಎಂದು ಸರ್ಕಾರಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಒಂದು ವರ್ಷದಲ್ಲಿ ಮೃತಪಟ್ಟ ಅಷ್ಟೂ ಮಂದಿಯಲ್ಲಿ ಅರ್ಧದಷ್ಟು ಜನ ಮಹಾರಾಷ್ಟ್ರದವರೇ ಆಗಿದ್ದಾರೆ. ಮಹಾರಾಷ್ಟ್ರದಲ್ಲಿ 217 ಮಂದಿ ಹಂದಿಜ್ವರಕ್ಕೆ ಬಲಿಯಾಗಿದ್ದು, 1,793 ಹಂದಿಜ್ವರ ಪ್ರಕರಣಗಳು ವರದಿಯಾಗಿವೆ. ದೆಹಲಿಯಲ್ಲಿ ಒಂದು ಸಾವು ಸಂಭವಿಸಿದ್ದು, 111 ಜನರಲ್ಲಿ ಸೋಂಕು ಕಂಡುಬಂದಿದೆ. ಒಟ್ಟಾರೆ 6,803 ಹಂದಿಜ್ವರ ಪ್ರಕರಣಗಳು ಪತ್ತೆಯಾಗಿವೆ ಎನ್ನಲಾಗುತ್ತಿದೆ.
ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ಚರ್ಚೆ ನಡೆಸಿದ್ದಾರೆ. ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ನ್ಯಾಷನಲ್​ ಸೆಂಟರ್​ ಫಾರ್​ ಡಿಸೀಸ್​ ಕಂಟ್ರೋಲ್ (NCDC) ಹಾಗೂ ಎಮರ್ಜೆನ್ಸಿ ಮೆಡಿಕಲ್​ ರಿಲೀಫ್​ ಜಂಟಿಯಾಗಿ ರಾಜ್ಯಗಳೊಂದಿಗೆ ಸಂಪರ್ಕದಲ್ಲಿದ್ದು, ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ಸಲಹೆ, ತರಬೇತಿ ನೀಡಲು  ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ