ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರ ಪ್ರವೇಶ: ತೀರ್ಪು ಮರುಪರಿಶೀಲನೆ ಮುಂದೂಡಿದ ಸುಪ್ರೀಂ

ನವದೆಹಲಿ: 50 ವರ್ಷದೊಳಗಿನ ಮಹಿಳೆಯರು ಅಯ್ಯಪ್ಪನ ದೇಗುಲ ಪ್ರವೇಶಿಸಲು ಅನುಮತಿ ನೀಡಿದ್ದ ಸುಪ್ರೀಂಕೋರ್ಟ್​ ತೀರ್ಮಾನವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಪುನರ್​ ಅಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್​ ನವೆಂಬರ್​ 13ಕ್ಕೆ ಮುಂದೂಡಿದೆ.

ಶತಮಾನಗಳಿಂದ ಆಚರಿಸಿಕೊಂಡು ಬಂದಿದ್ದ ಪದ್ಧತಿಯನ್ನು ಮುರಿಯುತ್ತಿರುವುದು ಸರಿಯಲ್ಲ ಎಂದು ಅಯ್ಯಪ್ಪನ ದೇಗುಲದ ಪೂಜಾರಿಗಳು ಸೇರಿ, ಹಲವಾರು ಮಂದಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದರ ನಡುವೆಯೂ ಇತ್ತೀಚೆಗೆ ಅಯ್ಯಪ್ಪನ ದೇಗುಲ ಪ್ರವೇಶಿಸಲು ಮುಂದಾಗಿ, ಭದ್ರತೆ ಕಾರಣ ವಾಪಸ್ಸಾಗಬೇಕಾಯಿತು. ನಿನ್ನೆಯಷ್ಟೇ ಐದು ದಿನಗಳ ಕಾಲ ತೆರೆಯಲಾಗಿದ್ದ ಅಯ್ಯಪ್ಪನ ದೇಗುಲವನ್ನು ಬಂದ್​ ಮಾಡಲಾಗಿತ್ತು.
ದೇಗುಲ ಪ್ರವೇಶಿಸುವ ಕುರಿತಾಗಿ ಈವರೆಗೂ ಪ್ರತಿಭಟನಾಕಾರರು ಹಾಗೂ ಮಹಿಳಾ ಭಕ್ತರ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಇಂದು ಸುಪ್ರೀಂ ತನ್ನ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾದ ಪುನರ್​ ಪರಿಶೀಲನಾ ಅರ್ಜಿ ವಿಚಾರಣೆ ಮುಂದೂಡಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ