ಬೆಂಗಳೂರು, ಅ.21- ಇಂದಿನ ಯುವ ಸಮುದಾಯ ಹಣ ವ್ಯಾಮೋಹದಲ್ಲಿ ತನ್ನ ಜೀವನ ಕ್ರಮವನ್ನೇ ಹಾಳು ಮಾಡಿಕೊಳ್ಳುತ್ತಿದೆ. ಸಾಮಾಜಿಕ ಮೌಲ್ಯವನ್ನು ಮರೆಯುತ್ತಿರುವುದು ದುರಾದೃಷ್ಟಕರ ಎಂದು ಸಾಹಿತಿ ಹಾಗೂ ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ನಾ.ಮೊಗಸಾಲೆ ಇಂದಿಲ್ಲಿ ವಿಷಾದ ವ್ಯಕ್ತಪಡಿಸಿದರು.
ಇಂದಿನ ಯಾಂತ್ರಿಕ ಯುಗದಲ್ಲಿ ಯುವ ಸಮುದಾಯ ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ತಮ್ಮ ಗುರಿಯನ್ನು ಮರೆಯುತ್ತಿದ್ದಾರೆ. ದೇಶಪ್ರೇಮ , ಸಂಸ್ಕøತಿಯನ್ನು ನಿರ್ಲಕ್ಷಿಸಿ ಕೇವಲ ಹಣ ಗಳಿಕೆಯೊಂದರಲ್ಲಿ ವ್ಯಾಮೋಹ ಹೊಂದಿದ್ದಾರೆ ಎಂದು ಹೇಳಿದರು.
ಸೌರಶಕ್ತಿ ಹರಿಕಾರ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕøತ ಡಾ.ಹರೀಶ್ ಹಂದೆ ಅವರ ಆದರ್ಶಗಳು ಇಂದಿನ ಯುವ ಸಮುದಾಯಕ್ಕೆ ಅಗತ್ಯವಾಗಿದೆ. ಅವರ ಪರಿಶ್ರಮ ಹಾಗೂ ಸಾಧಿಸಬೇಕೆಂಬ ಅವರ ಛಲ ಅವರನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ದಿದೆ ಎಂದು ಅವರು ಹೇಳಿದರು.
ಕಾಂತಾವರ ಕನ್ನಡ ಸಂಘಟನೆಗೆ ನೀಡುತ್ತಿರುವ ಅನುದಾನವನ್ನು ಮೊಟಕುಗೊಳಿಸಲಾಗಿದೆ. ಮತ್ತು ಪೆÇ್ರೀ ನೀಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಇದೇ ವೇಳೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಮಾತನಾಡಿ, ನಾನು ಸರ್ಕಾರಿ ಹುದ್ದೆಯಲ್ಲಿದ್ದಾಗ ಕನ್ನಡಪರ ಸಂಘ-ಸಂಸ್ಥೆಗಳ ಪೆÇ್ರೀ ಸದಾ ಮುಂದಾಗುತ್ತಿದ್ದೆ. ಅಂದಿನ ಮುಖ್ಯಮಂತ್ರಿ, ಸಚಿವರ ಮನವೊಲಿಸಿ ಕನ್ನಡ ಭಾಷೆ ಹಾಗೂ ಬೆಳವಣಿಗೆಗೆ ಎಲ್ಲರೊಂದಿಗೆ ಸೇರಿ ಕೆಲಸ ಮಾಡುತ್ತಿದ್ದೆವು. ಆದರೆ ಈಗ ಕೆಲವು ಸಮಸ್ಯೆಗಳು ಎದುರಾಗಿದೆ. ಇದರ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ನಂತರ ಮೋಹನ ಭಾಸ್ಕರ್ ಹೆಗಡೆ ಬರೆದಿರುವ ಡಾ.ಹರೀಶ್ ಹಂದೆ ಅವರ ಪುಸ್ತಕದ ಮೂರನೆ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.
ಪತ್ರಕರ್ತ ರವೀಂದ್ರ ಭಟ್ಟ , ವಿಕಾಸ ನೇಗಿಲೋಣಿ , ಉದ್ಯಮಿ ಜಗದೀಶ್ ಪೈಮತ್ತಿತರರು ಈ ಸಂದರ್ಭದಲ್ಲಿದ್ದರು.