ಮೈಸೂರು: ರಾಜಮಾತೆ ಪ್ರಮೋದಾ ದೇವಿ ಅವರ ತಾಯಿ ಪುಟ್ಟಚಿನ್ನಮ್ಮಣ್ಣಿ ನಿಧನರಾಗಿದ್ದು, ಅರಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಮೈಸೂರು ಅರಮನೆಯಲ್ಲಿ ನಡೆಯಬೇಕಿದ್ದ ವಿಜಯದಶಮಿ ಕಾರ್ಯಕ್ರಮಗಳು ರದ್ದಾಗಿವೆ.
ಮೂರು ದಿನ ಅರಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯುವುದಿಲ್ಲ. ಶಮಿ ಪೂಜೆ, ವಿಜಯ ಯಾತ್ರೆ, ವಜ್ರ ಮುಷ್ಟಿಕಾಳಗ ರದ್ದಾಗಿದೆ. ಕೆಲ ಕಾರ್ಯಕ್ರಮಗಳನ್ನು ಮತ್ತೆ ನಡೆಸುವ ಬಗ್ಗೆ ಜೋತಿಷಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅರಮನೆ ಮೂಲಗಳು ತಿಳಿಸಿವೆ.
ಜಟ್ಟಿ ಕಾಳಗ ನೋಡಲು ಕಾದು ಕುಳಿತಿದ್ದ ಜಟ್ಟಿ ಸಮುದಾಯದ ಕುಟುಂಬಸ್ಥರು ಅರಮನೆ ಮಂಡಳಿಯ ಸೂಚನೆ ಮೇರೆಗೆ ಹೊರನಡೆದಿದ್ದಾರೆ.
ಬೆಳಗ್ಗೆ 9.25ರಿಂದ 9.35ರೊಳಗೆ ಉತ್ತರ ಪೂಜೆ, ಅರಮನೆಯ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿದ್ದ ಆಯುಧಗಳಿಗೆ ಪೂಜೆ, ಶ್ರೀ ಭುವನೇಶ್ವರಿ ದೇವಾಲಯದಲ್ಲಿ ಪೂಜೆ, ಬೆಳಗ್ಗೆ 10 ಗಂಟೆಗೆ ನಡೆಯಬೇಕಿದ್ದ ವಜ್ರಮುಷ್ಟಿ ಕಾಳಗಗಳು ರದ್ದಾಗಿವೆ.
ಇನ್ನು ಮೈಸೂರು ದಸರಾ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆ ನಡೆಯಲಿದ್ದು ಗಜಪಡೆ ಕಣ್ತುಂಬಿಕೊಳ್ಳಲು ಜನಸಾಗರ ಹರಿದು ಬರುತ್ತಿದೆ.