ಶ್ರೀನಗರ, ಅ.18 – ಕಾಶ್ಮೀರ ಕಣಿವೆಯಲ್ಲಿ ಉಗ್ರರ ನಿಗ್ರಹ ಕಾರ್ಯಾಚರಣೆಯನ್ನು ಭದ್ರತಾಪಡೆಗಳು ಮತ್ತಷ್ಟು ತೀವ್ರಗೊಳಿಸಿವೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಇಂದು ಯೋಧರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ತೆಹ್ರೀಕ್-ಉಲ್-ಮುಜಾಹಿದ್ದೀನ್(ಟಿಯುಎಂ) ಉಗ್ರನೊಬ್ಬ ಹತನಾಗಿದ್ದಾರೆ.
ಶೌಕತ್ ಅಹಮದ್ ಭಟ್-ಯೋಧರು ಹೊಡೆದುರುಳಿಸಿರುವ ಭಯೋತ್ಪಾದಕ. ಈಗ ಬಾರಾಮುಲ್ಲಾ ಜಿಲ್ಲೆಯಲ್ಲಿ ಗ್ರೇನೆಡ್ ದಾಳಿ ನಡೆಸಿ ಮೂವರು ಪೆÇಲೀಸರನ್ನು ಗಾಯಗೊಳಿಸಿದ್ದ.
ನಿನ್ನೆ ಪಠಾಣ್ ಪ್ರದೇಶದಲ್ಲಿ ನಡೆದಿದ್ದ ಗ್ರೇನೆಡ್ ದಾಳಿ ನಂತರ ಈತನಿಗಾಗಿ ಭದ್ರತಾಪಡೆಗಳು ತೀವ್ರ ಶೋಧ ನಡೆಸುತ್ತಿದ್ದವು. ದಕ್ಷಿಣ ಕಾಶ್ಮೀರದಲ್ಲಿ ಈತನಿರುವ ಸುಳಿವು ಅರಿತ ಯೋಧರು ಶೋಧ ನಡೆಸುತ್ತಿದ್ದಾಗ ಗುಂಡಿನ ಕಾಳಗದಲ್ಲಿ ಶೌಕತ್ ಹತನಾದ.