ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಈ ಬಾರಿ ದಸರಾ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಿದ್ದಾರೆ

ನವದೆಹಲಿ, ಅ.18- ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಈ ಬಾರಿ ದಸರಾ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಿದ್ದಾರೆ. ಭಾರತ-ಪಾಕಿಸ್ತಾನ ಅತ್ಯಂತ ಸೂಕ್ಷ್ಮ ಗಡಿ ಪ್ರದೇಶದಲ್ಲಿ ಶಸ್ತ್ರಪೂಜೆಯಯನ್ನು ಸಿಂಗ್ ನೆರವೇರಿಸುವ ಮೂಲಕ ಶತ್ರು ಸಂಹಾರಕೆ ್ಕ(ಉಗ್ರರು ಮತ್ತು ಕದನ ವಿರಾಮ ಉಲ್ಲಂಘಿಸುವ ಪಾಕ್ ಸೈನಿಕರು) ಪರೋಕ್ಷ ಮುನ್ಸೂಚನೆ ನೀಡಲಿದ್ದಾರೆ

ಭಾರತದೊಂದಿಗೆ ಈ ಹಿಂದೆ ಪೂರ್ಣ ಪ್ರಮಾಣದ ಯುದ್ಧ ನಡೆಸಿ ಈಗಲೂ ಪಾಕಿಸ್ತಾನ ಕಾಲು ಕೆರೆದುಕೊಂಡು ಕ್ಯಾತೆ ತೆಗೆಯುತ್ತಿರುವ ಅತ್ಯಂತ ಸೂಕ್ಷ್ಮ ಸ್ಥಳದಲ್ಲೇ ಗೃಹ ಸಚಿವರು ಶಸ್ತ್ರ ಪೂಜೆ ನೆರವೇರಿಸಲು ಸಜ್ಜಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ರಾಜಸ್ತಾನದ ಭಾರತ-ಪಾಕಿಸ್ತಾನ ಗಡಿಯ ಬಿಕನೇರ್‍ನಲ್ಲಿ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಯೋಧರೊಂದಿಗೆ ಗೃಹ ಸಚಿವರು ನಾಳೆ ಅ.19ರಂದು ದಸರಾ ಆಚರಿಸಲಿದ್ದಾರೆ

ಗಡಿ ಪ್ರದೇಶದ ಮುಂಚೂಣಿ ನೆಲೆಯಲ್ಲಿನ ಬಾರ್ಡರ್ ಔಟ್ ಪೆÇೀಸ್ಟ್ (ಬಿಪಿಒ)ನಲ್ಲಿ ಶಸ್ತ್ರ ಪೂಜೆಯನ್ನೂ ಸಹ ಸಿಂಗ್ ನೆರವೇರಿಸುವರು.
ಕೇಂದ್ರದ ಸಚಿವರೊಬ್ಬರು ಇಂಡೋ-ಪಾಕ್ ಗಡಿಯಲ್ಲಿ ಇಂಥ ಪೂಜೆ ನೆರವೇರಿಸಿ ದಸರಾವನ್ನು ವಿಶಿಷ್ಟವಾಗಿ ಆಚರಿಸಲು ಮುಂದಾಗಿರುವುದು ಭಾರತದ ಇತಿಹಾದಲ್ಲಿ ಇದೇ ಮೊದಲು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ