ನವದೆಹಲಿ,ಅ.18- ಪಂಚಾತಾರ ಹೋಟೆಲ್ವೊಂದರಲ್ಲಿ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಹುಜನ ಸಮಾಜವಾದಿ ಪಕ್ಷದ ಮಾಜಿ ಸಂಸದ ರಾಕೇಶ್ ಪಾಂಡೆ ಪುತ್ರ ಆಶೀಶ್ ಪಾಂಡೆ ಇಂದು ಇಲ್ಲಿನ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ದೆಹಲಿ ಪಂಚತಾರಾ ಹೊಟೇಲ್ನಲ್ಲಿ ಪಿಸ್ತೂಲ್ ತೋರಿಸಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ನ್ಯಾಯಾಧೀಶರಾದ ಅಂಬಿಕಾ ಸಿಂಗ್ ಮಹತ್ವದ ತೀರ್ಪು ನೀಡಿ, ಆಶೀಶ್ ಪಾಂಡೆ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದ್ದರು.
ಈ ಹಿನ್ನೆಲೆಯಲ್ಲಿ ಪಾಂಡೆ ಇಂದು ನ್ಯಾಯಾಲಯದ ಮುಂದೆ ಶರಣಾಗಿ ಹೇಳಿಕೆಕೊಂದನ್ನು ದಾಖಲಿಸಿದ್ದಾರೆ.
ತಾವು ಆತ್ಮ ರಕ್ಷಣೆಗಾಗಿ ಪಿಸ್ತೂಲ್ ಹೊಂದಿದ್ದು, ಯಾರನ್ನು ಬೆದರಿಸಿಲ್ಲ. ಆದರೆ ಎಫ್ಐಆರ್ನಲ್ಲಿ ನನ್ನ ವಿರುದ್ದ ಸುಳ್ಳು ಅಂಶಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಆಶಿಶ್ ಪಾಂಡೆ ಕೈನಲ್ಲಿ ಪಿಸ್ತೂಲ್ ಹಿಡಿದು ಹೊಟೇಲ್ಗೆ ಬಂದು ಅತಿಥಿಗಳ ಮೇಲೆ ಕೂಗಾಡುತ್ತಿದ್ದ ವಿಡಿಯೋ ವೈರಲ್ಲಾಗಿತ್ತು. ಈ ಬಗ್ಗೆ ದೆಹಲಿ ಪೆÇಲೀಸರು ಹೊಟೇಲ್ ಸಿಬ್ಬಂದಿ ದೂರಿನನ್ವಯ ಎಫ್ಐಆರ್ ದಾಖಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಮ್ಯಾಜಿಸ್ಟ್ರೇಟ್ ಕೋರ್ಟ್, ಬಿಎಸ್ಪಿ ನಾಯಕನ ಪುತ್ರನಿಗೆ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.
ಕಾನೂನು ಉಲ್ಲಂಘನೆ ಮಾಡುತ್ತಿರೋ ಆಶೀಶ್ ಪಾಂಡೆಯನ್ನ ಪೆÇಲೀಸರ ವಶಕ್ಕೆ ಒಪ್ಪಿಸುವಂತೆ ಬಿಎಸ್ಪಿ ನಾಯಕ ರಾಕೇಶ್ ಪಾಂಡೆಯವರಿಗೆ ಪೆÇಲೀಸರು ಸೂಚನೆ ನೀಡಿದ್ದಾರೆ. ವಾರೆಂಟ್ ಹಿಡಿದೇ ಪೆÇಲೀಸರು ಈಗ ಆಶೀಶ್ ಪಾಂಡೆ ಬಂಧನಕ್ಕೆ ಬಲೆ ಹೆಣೆಯುತ್ತಿದ್ದಾರೆ.