ಬೆಂಗಳೂರು, ಅ.17- ಮೋಜಿನ ಜೀವನ ನಡೆಸಲು ಕಾರಿನಲ್ಲಿ ಬಂದು ಮನೆಗಳ್ಳತನ ಹಾಗೂ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಾಗಡಿ ರಸ್ತೆ ಠಾಣೆ ಪೆÇಲೀಸರು ಬಂಧಿಸಿ 11 ಲಕ್ಷ ರೂ.ಬೆಲೆಬಾಳುವ 9 ಬೈಕ್ ಹಾಗೂ 6 ಕಂಪ್ಯೂಟರ್ಗಳನ್ನು ವಶಪಡಿಸಿಕೊಂಡಿದ್ದಾರೆ.
ನಾಯಂಡಹಳ್ಳಿಯ ಸೂರ್ಯ (22), ಸಿಟಿ ಮಾರ್ಕೆಟ್ನ ಪ್ರಶಾಂತ್ (22) ಮತ್ತು ಮೈಸೂರು ರಸ್ತೆಯ ದಶರಥ (25) ಬಂಧಿತರು.
ಪಶ್ಚಿಮ ವಿಭಾಗದ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗುತ್ತಿದ್ದ ಕನ್ನಗಳವು ಹಾಗೂ ದ್ವಿಚಕ್ರ ವಾಹನ ಕಳವು ಪ್ರಕರಣಗಳ ಪತ್ತೆಗಾಗಿ ವಿಜಯನಗರ ಉಪವಿಭಾಗದ ಸಹಾಯಕ ಪೆÇಲೀಸ್ ಆಯುಕ್ತ ಪರಮೇಶ್ವರ್ ಹೆಗಡೆ ಅವರ ನೇತೃತ್ವದಲ್ಲಿ ಮಾಗಡಿ ರಸ್ತೆ ಠಾಣೆ ಇನ್ಸ್ಪೆಕ್ಟರ್ ಹೇಮಂತ್ಕುಮಾರ್ ಮತ್ತು ಸಿಬ್ಬಂದಿಯವರಿಗೆ ಸೂಕ್ತ ಸಲಹೆ-ಸೂಚನೆ ನೀಡಿ ವಿಶೇಷ ತಂಡ ರಚನೆ ಮಾಡಲಾಗಿತ್ತು.
ಈ ತಂಡ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳು ಮೋಜಿನ ಜೀವನ ನಡೆಸಲು ರಿಟ್ಜ್ ಕಾರಿನಲ್ಲಿ ಬಂದು ನಗರದ ಮಾಗಡಿ ರಸ್ತೆ, ರಾಜಾಜಿನಗರ, ಚಾಮರಾಜಪೇಟೆ, ಬ್ಯಾಡರಹಳ್ಳಿ, ಶೇಷಾದ್ರಿಪುರಂ, ಕೆಂಗೇರಿ ಕಡೆಗಳಲ್ಲಿ ಕನ್ನಗಳವು, ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ.
ಆರೋಪಿಗಳಿಂದ 11 ಲಕ್ಷ ರೂ.ಬೆಲೆಬಾಳುವ 9 ದ್ವಿಚಕ್ರ ವಾಹನಗಳು, 6 ಕಂಪ್ಯೂಟರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.