ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂ.ಎಸ್.ಧೋನಿ ಪುತ್ರಿ ಝೀವಾ ತುಂಟಾಟಗಳ ವಿಡಿಯೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್.
ಇಷ್ಟು ಚಿಕ್ಕ ವಯಸ್ಸಿನಲ್ಲೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳನ್ನ ಹೊಂದಿರುವ ಝೀವಾ ಇದೀಗ ಫಿಟ್ನೆಸ್ ವಿಡಿಯೊವೊಂದನ್ನ ಪೋಸ್ಟ್ ಮಾಡಿದ್ದಾರೆ. ಆ ವಿಡಿಯೊದಲ್ಲಿ ಝೀವಾ sಫಿಟ್ನೆಸ್ ಮಾಡಿ ತೋರಿಸಿದ್ದಾಳೆ. ಈ ವಿಡಿಯೊವನ್ನ ತಾಯಿ ಸಾಕ್ಷಿ ಮಲ್ಲಿಕ್ ಫಿಟ್ನೆಸ್ ವಿಡಿಯೊವನ್ನ ಪೋಸ್ಟ್ ಮಾಡಿದ್ದಾರೆ.
ಝೀವಾ ಕೆಲವು ಸೆಕೆಂಡುಗಳ ಕಾಲ ಫಿಟ್ನಸ್ ಮಾಡಿ ತೋರಿಸಿದ್ದಾಳೆ ಎಂದು ಕ್ಯಾಪ್ಶನ್ ಹಾಕಿದ್ದಾರೆ.
ಫಿಟ್ನೆಸ್ ವಿಚಾರದಲ್ಲಿ ಧೋನಿ ಯುವ ಕ್ರಿಕೆಟಿಗರಿಗೆ ಮಾದರಿಯಾಗಿದ್ದಾರೆ. ಮುಂಬರುವ ವಿಂಡೀಸ್ ವಿರುದ್ಧದ ಏಕದಿನ ಸರಣಿಗಾಗಿ ಧೋನಿ ರಾಂಚಿಯಲ್ಲಿರುವ ತಮ್ಮ ಮನೆಯಲ್ಲಿ ಫಿಟ್ನೆಸ್ ಮಾಡಿ ಸಜ್ಜಾಗುತ್ತಿದ್ದಾರೆ. ಇದೀಗ ಝೀವಾ ಅಪ್ಪನಂತೆ ಮಗಳು ಎನ್ನುವಂತೆ ಫಿಟ್ನಸ್ ಮಾಡಿ ತೋರಿಸಿದ್ದಾಳೆ.