ತಿತ್ಲಿ ಚಂಡಮಾರುತ: ಒಡಿಶಾದಲ್ಲಿ ಭಾರೀ ಮಳೆಗೆ 12 ಜನರ ಸಾವು, ನಾಲ್ವರು ನಾಪತ್ತೆ

ನವದೆಹಲಿ : ಒಡಿಶಾದಲ್ಲಿ ಮೂರು ಮಕ್ಕಳು ಸೇರಿದಂತೆ 12 ಜನರು ತಿತ್ಲಿ ಚಂಡಮಾರುತಕ್ಕೆ  ಬಲಿಯಾಗಿದ್ದಾರೆ.
ರಾಯಘಡದಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ 22 ಜನರು ಗುಹೆಯ ಬಳಿ ಆಶ್ರಯ ಪಡೆದಿದ್ದಾಗ ಗುಡ್ಡ ಜಾರಿ ಈ ಅಪಘಾತ ಸಂಭವಿಸಿದೆ. ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದ್ದರೂ ಈ ಅಪಘಾತ ನಡೆದಿದೆ.  ಘಟನೆಯಲ್ಲಿ ಸಾವನ್ನಪ್ಪಿದ 12 ಜನರ ದೇಹ ಪತ್ತೆಯಾಗಿದ್ದು, 4 ಜನರ ದೇಹಕ್ಕೆ ಶೋಧ ಕಾರ್ಯ ಆರಂಭವಾಗಿದೆ,
ಅಪಾಯಕ್ಕೆ ಸಿಲುಕಿದ ಸಂದರ್ಭದಲ್ಲಿ ಸಹಾಯಕ್ಕಾಗಿ ಜಿಲ್ಲಾಧಿಕಾರಿ, ಸ್ಥಳೀಯ ಪೊಲೀಸರಿಗೆ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೆ ಮೃತದೇಹವನ್ನು ಜಿಲ್ಲಾಡಳಿತ ಕಚೇರಿಯ ಮುಂದೆ ಇಟ್ಟು ಪರಿಹಾರಕ್ಕಾಗಿ ಹೋರಾಟ ಮಾಡುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಇದಾಗ್ಯೂ ತಿತ್ಲಿ ಚಂಡಮಾರುತದಿಂದ ಸಾವು ಸಂಭವಿಸಿರುವುದರ ಬಗ್ಗೆ ತಕ್ಷಣಕ್ಕೆ ಯಾವುದೇ ವರದಿ ದಾಖಲಾಗಿಲ್ಲ. ಮಳೆ ಪ್ರವಾಹದಿಂದ 21 ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಪ್ರತ್ಯೇಕ ಘಟನೆಗಳಲ್ಲಿ ಗಜಪತಿ ನಗರದಲ್ಲಿ 15 ಜನ, ನಯಗರದಲ್ಲಿ 2 ಹಾಗೂ ಕಂದಮಲ್​, ಕಟಕ್​, ಕೆಂಜೋಹರ್​ ಹಾಗೂ ಅನುಗುಲ್​ ಜಿಲ್ಲೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಒಡಿಶಾದ ದಕ್ಷಿಣ ಜಿಲ್ಲೆಗಳಾದ ಗಜಾಂ, ಗಜಪತಿ, ರಾಯಘಡ ದಲ್ಲಿ ಚಂಡಮಾರುತದಿಂದ ಭಾರೀ ಮಳೆಯಾಗುತ್ತಿದ್ದು 60 ಲಕ್ಷ ಜನರು ಪ್ರವಾಹ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರ ರಕ್ಷಣಾ ಕಾರ್ಯಕ್ಕೆ ಎನ್​ಡಿಆರ್​ಎಫ್​ ಮತ್ತು ಒಡಿಆರ್​ಎಎಫ್​ ಮಂದಾಗಿದೆ.
ಶನಿವಾರದವರೆಗೆ ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ