ಖ್ಯಾತ ಹಿಂದೂಸ್ಥಾನಿ ಸಂಗೀತಗಾರ್ತಿ ಅನ್ನಪೂರ್ಣ ದೇವಿ ನಿಧನ

ಮುಂಬೈ: ಖ್ಯಾತ ಹಿಂದೂಸ್ಥಾನಿ ಸಂಗೀತಗಾರರಾಗಿದ್ದ ಅನ್ನಪೂರ್ಣ ದೇವಿ (91) ಅನಾರೋಗ್ಯದಿಂದ ಇಂದು ಮೃತಪಟ್ಟಿದ್ದಾರೆ.
ಪದ್ಮಭೂಷಣ ಪ್ರಶಸ್ತಿ ವಿಜೇತರಾಗಿದ್ದ ಅನ್ನಪೂರ್ಣ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಬ್ರೀಚ್​ ಕ್ಯಾಂಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಶನಿವಾರ ಮುಂಜಾನೆ 3.51ಕ್ಕೆ ಅಸುನೀಗಿದರು.
ಹಿಂದೂಸ್ಥಾನ ಶಾಸ್ತ್ರೀಯ ಸಂಗೀತದಲ್ಲಿ  ಸುರ್ಬಹಾರ್​ ವಾದ್ಯವನ್ನು ಅವರು ನುಡಿಸುತ್ತಿದ್ದರು. ಇವರು ಅಲ್ಲಾವುದ್ದೀನ್​ ಖಾನ್​ ಮಗಳು ಮತ್ತು ಶಿಷ್ಯೆಯಾಗಿದ್ದರು.
ಮಧ್ಯಪ್ರದೇಶದ ಮೈಹರ್​ನಲ್ಲಿ 1927ರಲ್ಲಿ ಜನಿಸಿದ್ದ ಅನ್ನಪೂರ್ಣ ದೇವಿ, ಪಂಡಿತ್​ ರವಿಶಂಕರ್​ ಅವರನ್ನು ಮದುವೆಯಾಗಿದ್ದರು. ಅವರ ನಿಧನದ ಬಳಿಕ ರುಷಿಕುಮಾರ್​ ಪಾಂಡ್ಯ ಅವರನ್ನು ಮದುವೆಯಾಗಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ