ಕಾಂಗ್ರೆಸ್​ಗೆ ಭಾರೀ ಹೊಡೆತ; ಚುನಾವಣೆ ಹೊಸ್ತಿಲಲ್ಲಿರುವ ಛತ್ತೀಸ್​ಗಢದಲ್ಲಿ ಬಿಜೆಪಿ ಸೇರಿದ ಕೈ ಮುಖಂಡ

ಛತ್ತೀಸ್ಗಢವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿರುವ ಛತ್ತಿಸ್​ಗಢ್​​ ದಲ್ಲಿ ಕಾಂಗ್ರೆಸ್​ಗೆ ಭಾರೀ ಹಿನ್ನಡೆಯುಂಟಾಗಿದೆ. ಇನ್ನೇನು ಚುನಾವಣೆಗೆ ಎರಡು ತಿಂಗಳು ಬಾಕಿ ಇದೆ ಎನ್ನುವ ಸಮಯದಲ್ಲಿ ರಾಜ್ಯ ಕಾಂಗ್ರೆಸ್​ ಕಾರ್ಯಕಾರಿ ಅಧ್ಯಕ್ಷ ರಾಮ್​ದಯಾಳ್​ ಯೂಕಿ ಬಿಜೆಪಿ ಸೇರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಚುನಾವಣಾ ಪ್ರಚಾರದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಹಾಗೂ ಮುಖ್ಯಮಂತ್ರಿ ರಮಣ್​ ಸಿಂಗ್​ ನೇತೃತ್ವದಲ್ಲಿ ಯೂಕಿ ಇಂದು ಬಿಜೆಪಿ ಸೇರಿದ್ದಾರೆ.
ಈ ದಿಢೀರ್​ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಛತ್ತೀಸ್​ಗಢ್​​ ಕಾಂಗ್ರೆಸ್​ ಮುಖ್ಯಸ್ಥ ಭುಪೇಶ್​ ಬಂಗೇಲ್​, ಕೆಲವು ದಿನಗಳ ಹಿಂದೆ ನಾವು ರಾಮ್ದೆ ಅವರನ್ನು ಭೇಟಿಯಾಗಿದ್ದೇವು. ಆದರೆ, ಅವರು ಏನನ್ನು ತಿಳಿಸಲಿಲ್ಲ. ಚುನಾವಣೆ ಸಮಯದಲ್ಲಿ ಪಕ್ಷಾಂತರ ಹೊಸದಲ್ಲ ಎಂದಿದ್ದಾರೆ.
ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ರಾಹುಲ್​ ಗಾಂಧಿ ನೇತೃತ್ವದ  ಸಮಿತಿ ಅಂತಿಮ ಪಡಿಸಿದ್ದು, ಇನ್ನೇರಡು ದಿನಗಳಲ್ಲಿ ಹೆಸರುಗಳು ಪ್ರಕಟವಾಗಲಿವೆ. ಈ ನಡುವೆ ಈ ಬೆಳವಣಿಗೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರದಿಂದ ಬಿಜೆಪಿ ಮುಖ್ಯಸ್ಥ ಅಮಿತ್​ ಶಾ ರಾಜ್ಯದಲ್ಲಿ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ. ನಾಲ್ಕೂ ಬಾರಿ ಶಾಸಕರಾಗಿರುವ ಯೂಕಿ 2000ದಲ್ಲಿ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ