ಏಕದಿನ ಪಂದ್ಯದ ಆತಿಥ್ಯ ಕಳೆದುಕೊಳ್ಳುವ ಭೀತಿಯಲ್ಲಿ ಎಂಸಿಎ

ಮುಂಬೈ: ಮುಂಬರುವ ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ನಾಲ್ಕನೆ ಟೆಸ್ಟ್ ಪಂದ್ಯ ಮುಂಬೈನಲ್ಲಿ ನಡೆಯೋದು ಅನುಮಾನದಿಂದ ಕೂಡಿದೆ.
ಆಟಗಾರರಿಗೆ ವೇತನ ಪಾವತಿ ಮತ್ತು ಟಿಕೆಟ್ ಹಂಚಿಕೆ ಸಂಬಂಧ ವಿಷಯಗಳು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಗೆ(ಎಂಸಿಎ) ದೊಡ್ಡ ಇಕ್ಕಟ್ಟಿಗೆ ಸಿಲುವಂತೆ ಮಾಡಿದ್ದು ನಾಲ್ಕನೆ ಪಂದ್ಯದ ಆತಿಥ್ಯವನ್ನ ಕಳೆದುಕೊಳ್ಳುವ ಭೀತಿಯಲ್ಲಿದೆ. ಕ್ರಿಕೆಟ್ ಆಡಳಿತ ಸಮಿತಿಯ ವಿ.ಎನ್. ಕಾಂಡೆ ಮತ್ತು ಹೇಮಂತ್ ಗೋಖಲೆ ಎಂಸಿಎ ಆಡಳಿತವನ್ನ ಇದುವರೆಗೂ ನೋಡಿಕೊಳ್ಳುತ್ತಿದ್ದರು. ಇದೀಗ ಇವರ ಆಡಳಿತ ಅವಧಿ ಮೊನ್ನೆ ಸೆಪ್ಟೆಂಬರ್ 15ಕ್ಕೆ ಮುಗಿದಿದ್ದರಿಂದ ಆಡಳಿತ ವ್ಯವಸ್ಥೆ ಅಧೋಗತಿ ಸಾಗಿದೆ. ಎಂಸಿಎ ತನ್ನ ಸಿಬ್ಬಂದಿಗಳಿಗೆ ವೇತನ ನೀಡಿಲ್ಲ. ಇದಲ್ಲದೇ ಹೋಟೇಲ್ ಬಿಲ್, ಮೊನ್ನೆ ಮುಂಬೈ ತಂಡದ ಆಟಗಾರರಿಗೆ ವೇತನ ಪಾವತಿಸಿಲ್ಲ. ಇದೆಲ್ಲದಕ್ಕಿಂತ ದೊಡ್ಡ ಸಮಸ್ಯೆ ಎಂದರೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯಕ್ಕೆ ಎಂಸಿಎ ತನ್ನ 330 ಸದಸ್ಯರಿಗೆ ತಲಾ ನಾಲ್ಕು ಪಾಸ್ಗಳನ್ನ ನೀಡಬೇಕಿದೆ ಇದು ಕ್ರಿಕೆಟ್ ಅಸೋಸಿಯೇಷನ್ನನ್ನ ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಈ ಸಮಸ್ಯೆ ಬಗೆಹರಿಸಲು ಎಂಸಿಎ ಅಧಿಕಾರಿಗಳು ಬಿಸಿಸಿಐ ಸಿಇಒ ರಾಹುಲ್ ಜಹೋರಿ ಅವರನ್ನ ಭೇಟಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ