ಮಾ. 21 ಮತ್ತು 22ರಂದು ಕರಾವಳಿ ಭಾಗದಲ್ಲಿ 3ನೇ ಹಂತದ ಜನಾರ್ಶೀವಾದ ಯಾತ್ರೆ

ಬೆಂಗಳೂರು,ಮಾ.5- ಹೈದರಾಬಾದ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗದಲ್ಲಿ ಯಶಸ್ವಿ ಜನಾರ್ಶೀವಾದ ಯಾತ್ರೆ ನಡೆಸಿರುವ ಜೋಶ್‍ನಲ್ಲಿರುವ ಕಾಂಗ್ರೆಸ್ ಪಕ್ಷ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಇದೇ 21 ಮತ್ತು 22ರಂದು ಕರಾವಳಿ ಭಾಗದಲ್ಲಿ 3ನೇ ಹಂತದ ಜನಾರ್ಶೀವಾದ ಯಾತ್ರೆಯನ್ನು ಕೈಗೊಂಡಿದೆ.
ಮಂಗಳೂರು ಮತ್ತು ಉಡುಪಿಯಲ್ಲಿ 21 -22ರಂದು ಜನಾರ್ಶೀವಾದ ಯಾತ್ರೆಯ ರೋಡ್ ಶೋವನ್ನು ರಾಹುಲ್ ಗಾಂಧಿ ನಡೆಸಲಿದ್ದಾರೆ. ಕರಾವಳಿ ಕಾಂಗ್ರೆಸ್‍ನ ಹಿಡಿತ ತಪ್ಪುತ್ತಿದ್ದು, ಮತ್ತೆ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ಎಲ್ಲ ರೀತಿಯ ರಾಜಕೀಯ ಕಸರತ್ತು ನಡೆಸುತ್ತಿದೆ.
ಬಿಜೆಪಿಯ ಫೈರ್ ಬ್ರಾಂಡ್‍ಗಳಾದ ಬಿಜೆಪಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಸಂಸದ ನಳೀನ್‍ಕುಮಾರ್ ಕಟೀಲ್ ಅವರ ಹೇಳಿಕೆಗಳು ಬಿಜೆಪಿಯ ಜನಸುರಕ್ಷಾ ಯಾತ್ರೆಗಳನ್ನು ಕಾಂಗ್ರೆಸ್ ಹೇಗೆ ಎದುರಿಸುತ್ತದೆ ಹಾಗೂ ಜನಾರ್ಶೀವಾದ ಯಾತ್ರೆ ಮೂಲಕ ಬಿಜೆಪಿಗೆ ಹೇಗೆ ಉತ್ತರ ನೀಡುತ್ತದೆ ಎಂಬುದನ್ನು ಕಾದು ನೋಡಬೇಕು.
ಅದೇ ರೀತಿ 24-25ರಂದು ಮೈಸೂರು ಭಾಗದಲ್ಲಿ ರಾಹುಲ್ ಗಾಂಧಿ ಅವರು ಜನಾರ್ಶೀವಾದ ಯಾತ್ರೆ ನಡೆಸಲಿದ್ದು, ಬಹಿರಂಗ ಸಮಾವೇಶವನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಎಲ್ಲ ರಾಜಕೀಯ ಪಟ್ಟುಗಳನ್ನು ಕರತಲಮಲಕ ಮಾಡಿಕೊಂಡಿರುವ ಸಿದ್ದರಾಮಯ್ಯ ತಮ್ಮ ತವರು ಕ್ಷೇತ್ರದಲ್ಲಿ ಜನಾಶೀರ್ವಾದ ಯಾತ್ರೆಯನ್ನು ಯಶಸ್ವಿಗೊಳಿಸುವ ತಂತ್ರ ರೂಪಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ