ಬಾಗಲಕೋಟೆ: ಜಮಖಂಡಿ ಮತಕ್ಷೇತ್ರದ ಸಿದ್ದು ನ್ಯಾಮಗೌಡ್ರ ಅಕಾಲಿಕ ನಿಧನದಿಂದಾಗಿ ಮತಕ್ಷೇತ್ರದ ಉಪಚುನಾವಣೆಯ ದಿನಾಂಕ ಕೂಡ ಅಂತಿಮವಾಗಿದೆ ಬರೋ ತಿಂಗಳು 3 ಕ್ಕೆ ಚುನಾವಣೆ ನಡೆಸುವದಾಗಿ ಚುನಾವಣಾ ಆಯೋಗ ತಿಳಿಸಿದೆ.
ಆದರೆ ಜಮಖಂಡಿಯಲ್ಲಿ ಬಿಜೆಪಿ ಪಕ್ಷದ ಟಿಕೆಟ್ ನನಗ್ ಬೇಕು ನನಗ್ ಬೇಕು.. ಎಂದು ಬೆಂಗಳೂರಿಗೆ ಹೋಗಿ ಒತ್ತಾಯ ಮಾಡುತ್ತಿರುವ ಶ್ರೀಕಾಂತ್ ಕುಲಕರ್ಣಿ. ಸಂಗಮೇಶ್ ನಿರಾಣಿ. ಜಗದೀಶ್ ಗುಡಗುಂಟಿ ಈ ಮೂವರ ಪೈಪೋಟಿ ಜಾಸ್ತಿನೇ ಆಗ್ತಿದೆ. ಆದರೆ ಮತಕ್ಷೇತ್ರದಲ್ಲಿ ಬಿಜೆಪಿ ಆಕಾಂಕ್ಷಿಗಳು ಮತ್ತು ಪಕ್ಷದಲ್ಲಿ ಸೇವೆ ಮಾಡಿರುವ ಅಭ್ಯರ್ಥಿಗಳು ಆದ ಉಮೇಶ್ ಮಹಾಬಳಶೆಟ್ಟಿ. ಬಿ ಎಸ್ ಸಿಂಧೂರ್. ಒಳಗೊಂಡಂತೆ ಇನ್ನೂ ಅನೇಕ ಆಕಾಂಕ್ಷಿಗಳಿದ್ದಾರೆ ಆದರೆ ಶ್ರೀಕಾಂತ್ ಕುಲಕರ್ಣಿ ಮಾತ್ರ ಪ್ರಭಲವಾಗಿ ಸಂಘಟನೆಯಲ್ಲಿ ತುಂಬಾ ಹಳಬರು ಜೊತೆಯಲ್ಲಿ ಸಂಘ ಕಟ್ಟಿ ಬೆಳೆಸುವದರಲ್ಲೂ ಸಾಕಷ್ಟು ಓಡಾಡಿದವರು ವಿಶೇಷ ಎಂದರೆ ಹೈಕಮಾಂಡಿನಲ್ಲಿ ಒಳ್ಳೆ ಹೆಸರು ಇಟ್ಟಿರುವವರು ಹಾಗಾಗಿ ಶ್ರೀಕಾಂತ್ ಕುಲಕರ್ಣಿಯವರಿಗೆ ಬಹುತೇಕ ಬಿಜೆಪಿ ಟಿಕೆಟ್ ಪೈನಲ್ ಎಂದು ಹೇಳಲಾಗ್ತಿದೆ.