ರಸ್ತೆ ಕಾಮಗಾರಿಗೆ ಭೂಮಿ ಪೂಜೆ: ನೀರಾವರಿಗೆ ನಿರಂತರ ಹೋರಾಟ: ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ)

ಮುದ್ದೆಬಿಹಾಳ: ಮುದ್ದೇಬಿಹಾಳ ತಾಲೂಕಿನ ನಡಹಳ್ಳಿ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ತಾಲೂಕಿನ ವನಹಳ್ಳಿ ಗ್ರಾಮದಿಂದ ಇಂಗಳಗೇರಿ ಕ್ರಾಸ್ ವರೆಗಿನ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆಯನ್ನು ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ನೆರವೇರಿಸಿದರು.
ಬಳಿಕ ಅವರು ಮಾತನಾಡಿ, ತಾಲ್ಲೂಕಿನ ಸಮಗ್ರ ನೀರಾವರಿಗಾಗಿ ನಿರಂತರವಾಗಿ ಹೋರಾಟ ಮುಂದುವರಿಸುತ್ತೇನೆ. ಈಗಾಗಲೇ ತಾಲೂಕಿನ ೧೫ ಕೆರೆಗಳನ್ನು ತುಂಬಿಸಲಾಗಿದೆ.ಅಂತರ್ಜಲಮಟ್ಟ ಹೆಚ್ಚುವ ಜೊತೆಗೆ ಜಾನುವಾರುಗಳಿಗೆ ನೀರಿನ ಸಮಸ್ಯೆ ನೀಗುತ್ತದೆ.ನಡಹಳ್ಳಿ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಇತ್ತು.ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪಡೇಕನೂರ ಕೆರೆ ತುಂಬಿದ್ದು ಸೊಗಲಿ ಹಳ್ಕಲಕ್ಕೆ ಪ್ರತಿ ಹಳ್ಳಕ್ಕೂ ಚೆಕ್ ಡ್ಯಾಂ ಕಟ್ಟಿ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ.
ಬರಗಾಲದಿಂದ ನಾವು ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಹೇಳಿದರು.

ಕುಡಿಯುವುದಕ್ಕೆ ನೀರನ್ನು ಪಡೆಕನೂರ ಅಥವಾ ಇಂಗಳಗೇರಿ ಕೆರೆಯ ಮೂಲಕ ಒದಗಿಸುವ ಕುರಿತು ಚಿಂತಿಸಲಾಗುತ್ತಿದೆ.ಹಂದ್ರಾಳ,ಲಿಂಗದಳ್ಳಿ, ವನಹಳ್ಳಿ ಹಾಗೂ ನಡಹಳ್ಳಿ ಗ್ರಾಮಕ್ಕೆ ನೀರು ಪೂರೈಸುವ ಸಲುವಾಗಿ ಶಾಶ್ವತವಾಗಿ ಪರಿಹರಿಸಲು ಕ್ರಮ ಜರುಗಿಸಲಾಗುವುದು.

ಗ್ರಾಮದಲ್ಲಿ ಸಂಪೂರ್ಣ ಸಿಸಿ ರಸ್ತೆ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ.ನಾಲ್ಕು ಗ್ರಾಮಗಳಿಗೆ ೨ ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು. ಅಭಿವೃದ್ಧಿ ಮುಖ್ಯ ರಾಜಕಾರಣ ಬೇಡ.ಯಾರೇ ಮತ ಹಾಕಿರಲಿ,ಹಾಕದಿರಲಿ ಸಮಾನವಾಗಿ ಕಂಡು ಏನೇ ಸಮಸ್ಯೆಗಳಿದ್ದರೂ ನೇರವಾಗಿ ಸಂಪರ್ಕಿಸಿ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ
ಮಾಡುತ್ತೇನ ಎಂದು ಹೇಳಿದರು.

ತಾಲೂಕಿನಲ್ಲಿ ೪೬ ಕೆರೆಗಳಿದ್ದು ಎಲ್ಲ ಕೆರೆಗಳನ್ನು ತುಂಬಿಸಲಾಗುವುದು.ಅತೀ ಹೆಚ್ಚು ಅನುದಾನ ತಂದು ತೋರಿಸುತ್ತೇನೆ.ಜಿಲ್ಲೆಯಲ್ಲಿ ಹೆಚ್ಚು ಅನುದಾನ ಶಾಲೆಗಳ ಕೊಠಡಿಗಳ ನಿರ್ಮಾಣ,ದುರಸ್ತಿಗೆ ೨.೩೮ ಕೋಟಿ ರೂ.ಬಿಡುಗಡೆ ಆಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಸದಸ್ಯ ಸೋಮನಗೌಡ ಬಿರಾದಾರ ಕವಡಿಮಟ್ಟಿ ಮಾತನಾಡಿದರು.ಬಿಜೆಪಿ ಮುಖಂಡ ಬಸವರಾಜ ಗುಳಬಾಳ,ಕೆಆರ್ಡಿಸಿಎಲ್ ಸಹಾಯಕ ನಿರ್ದೇಶಕ ತಿಮ್ಮರಾಜಪ್ಪ,ತಾಪಂ ಸದಸ್ಯ ಸಿದ್ದನಗೌಡ ಪಾಟೀಲ, ಬಾಪುಗೌಡ ಗ್ರಾ ಪಂ.ಅಧ್ಯಕ್ಷ ಶಾಂತಗೌಡ ಶಾರದ ಹಳ್ಳಿ. ಪೀರಾಪುರ,ಪಿಡಿಓ ಜಿ.ಎಸ್. ಸಜ್ಜನ ಹಣಮಂತ್ರಾಯ ದೇವರಹಳ್ಳಿ ಇತರರು ಇದ್ದರು.ಹನಮಗೌಡ ಪೀರಾಪುರ ನಿರೂಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ