ಗಗನಮುಖಿಯಾದ ಪೆಟ್ರೋಲ್-ಡೀಸೆಲ್ ದರ

ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ರೂ.2.50 ಇಳಿಕೆ ಮಾಡಿದರೂ, ತೈಲ ಕಂಪನಿಗಳು ಮಾತ್ರ ಬೆಲೆ ಏರಿಕೆ ಮುಂದುವರಿಸಿವೆ.

ಭಾನುವಾರವಷ್ಟೇ ಪೆಟ್ರೋಲ್ ಬೆಲೆ 14 ಪೈಸೆ ಏರಿಕೆ ಮಾಡಿದ್ದ ತೈಲ ಕಂಪನಿಗಳು ಇಂದೂ ಕೂಡ ಮತ್ತೆ ಏರಿಕೆ ಮಾಡಿದ್ದು, ಪೆಟ್ರೋಲ್ ಬೆಲೆಯಲ್ಲಿ 21 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 29 ಪೈಸೆ ಏರಿಕೆ ಮಾಡಿವೆ.

ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ಬೆಲೆ ಪ್ರತೀ ಲೀಟರ್’ಗೆ ರೂ.82.3 ಹಾಗೂ ಡೀಸೆಲ್ ಬೆಲೆ ಪ್ರತೀ ಲೀಟರ್’ಗೆ ರೂ.73.82 ಆಗಿದೆ.

ಇನ್ನು ವಾಣಿಜ್ಯ ನರಗದಲ್ಲಿ ಪೆಟ್ರೋಲ್ ದರ 21 ಪೈಸೆ ಹಾಗೂ ಡೀಸೆಲ್ ದರ 31 ಪೈಸೆ ಏರಿಕೆಯಾಗಿದ್ದು, ಮುಂಬೈ ನಲ್ಲಿ ಇಂದಿನ ಪೆಟ್ರೋಲ್ ದರ ರೂ.87.50 ಹಾಗೂ ಡೀಸೆಲ್ ದರ ರೂ.77.37 ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ