ನವದೆಹಲಿ: ಐದು ರಾಜ್ಯಗಳು ಸೇರಿ ಕರ್ನಾಟಕದ ಎರಡು ಕ್ಷೇತ್ರಗಳ ಉಪಚುನಾವಣೆಯ ದಿನಾಂಕವನ್ನು ಪ್ರಕಟಿಸಿರುವ ಕೇಂದ್ರ ಚುನಾವಣಾ ಆಯೋಗ, ಇಂದಿನಿಂದಲೇ ನೀತಿ ಸಂಹಿತೆಯನ್ನು ಜಾರಿಗೊಳಿಸಿದೆ. ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ಐದು ರಾಜ್ಯಗಳ ಚುನಾವಣಾ ಪ್ರಕ್ರಿಯೆಯನ್ನು ಮುಗಿಸುವುದಾಗಿ ಮುಖ್ಯ ಚುನಾವಣಾಧಿಕಾರಿ ಓಂ ಪ್ರಕಾಶ್ ರಾವತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ಧಾರೆ.
ಐದು ರಾಜ್ಯಗಳಾದ ಮಧ್ಯಪ್ರದೇಶ, ಛತ್ತಿಸ್ಘಡ, ರಾಜಸ್ಥಾನ್, ಮಿಜೋರಾಂ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆ ಮತ್ತು ಕರ್ನಾಟಕದ ರಾಮನಗರ ಹಾಗೂ ಜಮಖಂಡಿ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕವನ್ನು ನಿಗದಿ ಮಾಡಲಾಗಿದೆ. ಕರ್ನಾಟಕದಲ್ಲಿ ತೆರವಾಗಿರುವ ಮೂರು ಲೋಕಸಭಾ ಚುನಾವಣೆಗೂ ದಿನಾಂಕ ನಿಗದಿ ಮಾಡಲಾಗಿದೆ. ಡಿಸೆಂಬರ್ 11ರಂದು ಎಲ್ಲಾ ಚುನಾವಣೆಗಳ ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಿಸಲಾಗುವುದು ಎಂದು ಓಂ ಪ್ರಕಾಶ್ ರಾವತ್ ತಿಳಿಸಿದರು.
ಚುನಾವಣಾ ವೇಳಾಪಟ್ಟಿ ಈ ಕೆಳಗಿನಂತಿದೆ
ರಾಜಸ್ಥಾನ:
ನಾಮಪತ್ರ ಸಲ್ಲಿಕೆ: ನವೆಂಬರ್ 19
ಹಿಂಪಡೆಯಲು ಕಡೆಯ ದಿನಾಂಕ: ನವೆಂಬರ್ 22
ಮತದಾನ: ಡಿಸೆಂಬರ್ 7
ಫಲಿತಾಂಶ: ಡಿಸೆಂಬರ್ 11
ತೆಲಂಗಾಣ:
ನಾಮಪತ್ರ ಸಲ್ಲಿಕೆ: ನವೆಂಬರ್ 19
ಹಿಂಪಡೆಯಲು ಕಡೆಯ ದಿನಾಂಕ: ನವೆಂಬರ್ 22
ಮತದಾನ: ಡಿಸೆಂಬರ್ 7
ಫಲಿತಾಂಶ: ಡಿಸೆಂಬರ್ 11
ಮಿಝೋರಾಂ:
ನಾಮಪತ್ರ ಸಲ್ಲಿಕೆ: ನವೆಂಬರ್ 9
ಹಿಂಪಡೆಯಲು ಕಡೆಯ ದಿನಾಂಕ: ನವೆಂಬರ್ 14
ಮತದಾನ: ನವೆಂಬರ್ 28
ಫಲಿತಾಂಶ: ಡಿಸೆಂಬರ್ 11
ಮಧ್ಯ ಪ್ರದೇಶ:
ನಾಮಪತ್ರ ಸಲ್ಲಿಕೆ: ನವೆಂಬರ್ 9
ಹಿಂಪಡೆಯಲು ಕಡೆಯ ದಿನಾಂಕ: ನವೆಂಬರ್ 14
ಮತದಾನ: ನವೆಂಬರ್ 28
ಫಲಿತಾಂಶ: ಡಿಸೆಂಬರ್ 11
ಛತ್ತಿಸ್ಗಢ:
ಮೊದಲ ಹಂತ
ನಾಮಪತ್ರ ಸಲ್ಲಿಕೆ: ಅಕ್ಟೋಬರ್ 23
ಹಿಂಪಡೆಯಲು ಕಡೆಯ ದಿನಾಂಕ: ಅಕ್ಟೋಬರ್ 26
ಮತದಾನ: ನವೆಂಬರ್ 12
ಎರಡನೇ ಹಂತ:
ನಾಮಪತ್ರ ಸಲ್ಲಿಕೆ: ನವೆಂಬರ್ 2
ಹಿಂಪಡೆಯಲು ಕಡೆಯ ದಿನಾಂಕ: ನವೆಂಬರ್ 5
ಮತದಾನ: ನವೆಂಬರ್ 20
ಫಲಿತಾಂಶ: ಡಿಸೆಂಬರ್ 11
ಕರ್ನಾಟಕ (ಉಪ ಚುನಾವಣೆಗಳು):
ನವೆಂಬರ್ 3: ಜಮಖಂಡಿ, ರಾಮನಗರ (ವಿಧಾನಸಭೆ), ಶಿವಮೊಗ್ಗ, ಬಳ್ಳಾರಿ ಮಂಡ್ಯ (ಲೋಕಸಭೆ) ಉಪಚುನಾವಣೆಗಳು
ಫಲಿತಾಂಶ: ನವೆಂಬರ್ 6