ರಾಜ್‍ಕೋಟ್: ವಿಂಡೀಸ್ ವಿರುದ್ಧ ಅಮೋಘ ಬೌಲಿಂಗ್ ಪ್ರದರ್ಶಿಸಿ 5 ವಿಕೆಟ್‍ಗಳನ್ನ ಪಡೆದ ಟೀಂ ಇಂಡಿಯಾದ ಚೈನಾಮನ್ ಸ್ಪಿನ್ನರ್ ಕುಲ್‍ದೀಪ್ ಯಾದವ್ ಎಲೈಟ್ ಕ್ಲಬ್‍ಗೆ ಸೇರಿದ್ದಾರೆ.
ಮೂರನೇ ದಿನದಾಟದ ಎರಡನೇ ಇನ್ನಿಂಗ್ಸ್‍ನಲ್ಲಿ ಕುಲ್‍ದೀಪ್ ಯಾದವ್ 14 ಓವರ್‍ಗಳನ್ನ ಹಾಕಿ 57 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದ್ರು. ಇದರೊಂದಿಗೆ ಕುಲ್‍ದೀಪ್ ಯಾದವ್ ಕ್ರಿಕೆಟ್‍ನ ಮೂರು ಆವೃತ್ತಿಗಳಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ರು.
ಈ ಸಾಧನೆ ಮಾಡಿದ ಕುಲ್‍ದೀಪ್ ವಿಶ್ವಕ್ರಿಕೆಟ್‍ನ ಏಳನೇ ಬೌಲರ್ ಹಾಗೂ 2ನೇ ಭಾರತೀಯ ಬೌಲರ್ ಎಂಬ ಗೌರವಕ್ಕೆ ಪಾತ್ರರಾದ್ರು. ಈ ಹಿಂದೆ ವೇಗಿ ಭುವನೇಶ್ವರ್ ಕುಮಾರ್ ಈ ಸಾಧನೆ ಮಾಡಿದ್ದರು.
ಟಿ ಮ್ ಸೌಥಿ(ನ್ಯೂಜಿಲೆಂಡ್), ಅಜಂತಾ ಮೆಂಡಿಸ್ (ಶ್ರೀಲಂಕಾ), ಉಮರ್ ಗುಲ್(ಪಾಕಿಸ್ತಾನ), ಲಸಿತ್ ಮಲಿಂಗಾ(ಶ್ರೀಲಂಕಾ), ಮತ್ತು ಇಮ್ರಾನ್ ತಹೀರ್(ದಕ್ಷಿಣ ಆಫ್ರಿಕಾ) ಕ್ರಿಕೆಟ್‍ನ ಮೂರು ಆವೃತ್ತಿಗಳಲ್ಲಿ 5 ವಿಕೆಟ್ ಪಡೆದ ಬೌಲರ್‍ಗಳಾಗಿದ್ದಾರೆ.
ಕುಲ್‍ದೀಪ್ ಯಾದವ್ ಕಳೆದ ವರ್ಷ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಮತ್ತು ಟಿ20 ಸರಣಿಗಳಲ್ಲಿ ಐದು ವಿಕೆಟ್ ಪಡೆದು ಮಿಂಚಿದ್ದರು.