ತುಮಕೂರು, ಮಾ.5- ಖಾಸಗಿ ಬಸ್ ಹಾಗೂ ಆಟೋ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ಬೆಳಗುಂಬ ಸಮೀಪ ನಡೆದಿದೆ.
ಮಾರುತಿ (23), ದೀಪು (20), ಶಬ್ಬಾಸ್ (23) , ವಸಂತಕುಮಾರ್ (19) ಮೃತಪಟ್ಟ ವ್ಯಕ್ತಿಗಳು.
ದೇವರಾಯನ ದುರ್ಗದಿಂದ ತುಮಕೂರು ಕಡೆಗೆ ಬರುತ್ತಿದ್ದ ಆಟೋ ಹಾಗೂ ತುಮಕೂರು ಕಡೆಯಿಂದ ಊರ್ಡಿಗೆರೆ ಕಡೆ ತೆರಳುತ್ತಿದ್ದ ಖಾಸಗಿ ಬಸ್ ಕೆಂಪೇಗೌಡ ಕಾಲೇಜು ಬಳಿ ತಿರುವಿನಲ್ಲಿ ಪರಸ್ಪರ ಎರಡು ವಾಹನ ಚಾಲಕರಿಗೆ ರಸ್ತೆ ಕಾಣದೆ ಡಿಕ್ಕಿ ಹೊಡೆದಿದೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ , ಗಂಭೀರವಾಗಿ ಗಾಯಗೊಂಡಿದ್ದ ವಸಂತಕುಮಾರ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಸುದ್ದಿ ತಿಳಿದು ಕ್ಯಾತಸಂದ್ರ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಜು, ವೃತ್ತ ನಿರೀಕ್ಷಕ ರಾಮಕೃಷ್ಣಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.