ರಾಯಚೂರು: ಸಂಶಯಾಸ್ಪದ ವಸ್ತುವೊಂದು ಸ್ಫೋಟಗೊಂಡು ಮಹಿಳೆಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಕೆಯ ಪತಿ ಹಾಗೂ ಮಗು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ನಗರದ ಹೊರವಲಯದ ಯರಮರಸ್ ಕ್ಯಾಂಪ್ ಬಳಿಯ ಪಾರಸ್ ವಾಟಿಕ್ ಬಡವಣೆ ಬಳಿ ಘಟನೆ ನಡೆದಿದೆ. ಅನಂತಮ್ಮ(35) ಮೃತಪಟ್ಟ ದುರ್ದೈವಿ. ಆಕೆಯ ಪತಿ ಲಕ್ಷ್ಮಣ ಹಾಗೂ ಮೂರು ವರ್ಷದ ಮಗು ಸಿದ್ದು ಗಂಭೀರ ಗಾಯಗೊಂಡಿದ್ದಾರೆ.
ಇವರು ಚಿಂದಿ ಆಯಲು ಹೋದಾಗ ಯಾವುದೋ ವಸ್ತುವೊಂದು ಸ್ಫೋಟಗೊಂಡು ಘಟನೆ ನಡೆದಿದೆ ಎನ್ನಲಾಗಿದೆ. ಇವರು ರಾಯಚೂರು ನಗರದ ಮೈಲಾರ ನಗರದ ನಿವಾಸಿಗಳು ಎಂದು ಹೇಳಲಾಗಿದೆ. ಇನ್ನು ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.