ರಾಜ್‍ಕೋಟ್: ಭರ್ಜರಿ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಕರ್ಷಕ ಶತಕ ಬಾರಿಸಿ ಮಿಂಚಿದ್ದಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್‍ನಲ್ಲಿ 24ನೇ ಶತಕ ಬರೆದ ಸಾಧನೆ ಮಾಡಿದ್ದಾರೆ.
ಮೊದಲ ದಿನ ಅಜೇಯ 76 ರನ್‍ಗಳಿಸಿದ್ದ ವಿರಾಟ್ ಕೊಹ್ಲಿ ಇಂದು ಎರಡನೆ ದಿನದಾಟದ ಪಂದ್ಯದಲ್ಲಿ ಬೊಂಬಾಟ್ ಬ್ಯಾಟಿಂಗ್ ಮಾಡಿದ್ರು. 184 ಎಸೆತದಲ್ಲಿ ಶತಕ ಬಾರಿಸಿ ಮಿಂಚಿದ್ರು. ಇಷ್ಟೆ ಅಲ್ಲ ವಿರಾಟ್ ಕೊಹ್ಲಿ ಹಲವಾರು ದಾಖಲೆಗಳನ್ನ ಮುಡಿಗೇರಿಸಿಕೊಂಡ್ರು.
ಅತಿ ಹೆಚ್ಚು ಶತಕ ಬಾರಿಸಿದ ಮೂರನೇ ನಾಯಕ
ವಿಂಡೀಸ್ ವಿರುದ್ಧ ಶತಕ ಬಾರಿಸುವ ಮೂಲಕ ಕೊಹ್ಲಿ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಸತಕ ಬಾರಿಸಿದ ಮೂರನೇ ನಾಯಕ ಎಂಬ ಗೌರವಕ್ಕೆ ಪಾತ್ರರಾದ್ರು. ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ 25, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 19, ವಿರಾಟ್ ಕೊಹ್ಲಿ 17 ಮತ್ತು ಅಲನ್ ಬಾರ್ಡರ್ ಮತ್ತು ಸ್ಟೀವ್ ವಾ ತಲಾ 15 ಶತಕಗಳನ್ನ ಬಾರಿಸಿದ ನಾಯಕರಾಗಿದ್ದಾರೆ.
ಕಡಿಮೆ ಇನ್ನಿಂಗ್ಸ್‍ಗಳಲ್ಲಿ ಶತಕ ಸಿಡಿಸಿದ 2ನೇ ಬ್ಯಾಟ್ಸಮನ್
ವಿರಾಟ್ ಕೊಹ್ಲಿ 24ನೇ ಶತಕ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್‍ಗಳಲ್ಲಿ ಸತಕ ಬಾರಿಸಿದ ಎರಡನೇ ಬ್ಯಾಟ್ಸ್‍ಮನ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. 24ನೇ ಶತಕ ಪೂರೈಸಲು ತೆಗೆದುಕೊಂಡಿದ್ದು 123 ಇನ್ನಿಂಗ್ಸ್, ಕ್ರಿಕೆಟ್ ದಂತ ಕತೆ ಡಾನ್ ಬ್ರಾಡ್ಮನ್ 66 ಇನ್ನಿಂಗ್ಸ್ ತೆಗೆದುಕೊಂಡಿದ್ರು. ಸವ್ಯ ಸಾಚಿ ಸಚಿನ್ ತೆಂಡೂಲ್ಕರ್ 125 ಇನ್ನಿಂಗ್ಸ್ ತೆಗೆದುಕೊಂಡಿದ್ರು.
ಆಧುನಿಕ ಕ್ರಿಕೆಟ್‍ನಲ್ಲಿ ಹೆಚ್ಚು ಅರ್ಧ ಶತಕ, ಶತಕ ಬಾರಿಸಿದವರು
ಕ್ಯಾಪ್ಟನ್ ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್‍ನಲ್ಲಿ 24 ಶತಕ 19 ಅರ್ಧ ಶತಕ ಬಾರಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ 23 ಶತಕ 24 ಅರ್ಧ ಶತಕ ಬಾರಿಸಿದ್ದಾರೆ. ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್ 18 ಶತಕ 26 ಅರ್ಧಶತಕ ಬಾರಿಸಿದ್ದಾರೆ. ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ 14 ಶತಕ ಮತ್ತು 41 ಅರ್ಧ ಶತಕ ಬಾರಿಸಿದ್ದಾರೆ.