ಉಪ ಮೇಯರ್ ನಿಧನಕ್ಕೆ ಉಪ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸಂತಾಪ

ಬೆಂಗಳೂರು: ಉಪ ಮಹಾಪೌರರಾದ ರಮೀಳಾ ಶಂಕರ್ ಅವರ ನಿಧನ ತೀವ್ರ ಆಘಾತ ಉಂಟು ನಾಡಿದೆ. ಇತ್ತೀಚೆಗಷ್ಟೆ ಉಪಮೇಯರ್ ಸ್ಥಾನ ಅಲಂಕರಿಸಿದ್ದ ಅವರ ಸಾವು ಜೀರ್ಣಿಸಿಕೊಳ್ಳುವುದೇ ಕಷ್ಟವಾಗುತ್ತಿದೆ.

ರಮೀಳ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಅವರ ಸಂಘಟನಾ ಚಾತುರ್ಯದಿಂದಲೇ ಎಲ್ಲ ಕೆಲಸವನ್ನು ಮಾಡುತ್ತಿದ್ದೆರು. ನೆನ್ನೆಯಷ್ಟೆ ಅವರೊಂದಿಗೆ ಕೆ.ಆರ್. ಮಾರುಕಟ್ಟೆ ಪರಿಶೀಲನೆ ನಡೆಸಿದೆ. ಬಹಳ ಕ್ರಿಯಾಶೀಲತೆಯಿಂದ ಪಾಲ್ಗೊಂಡಿದ್ದರು.

ಅವರು ಇಂದು ಇಲ್ಲ ಎಂದರೆ ಬಹಳ ಬೇಸರವಾಗುತ್ತಿದೆ. ಭಗವಂತ ಅವರ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ನೀಡಲಿ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಸಂತಾಪ ಸೂಚಿಸಿದ್ದಾರೆ.

ರಮೀಳ ಅವರ ಅಕಾಲಿಕ ನಿಧನದಿಂದ ಪರಮೇಶ್ವರ್ ಅವರ ಇಂದಿನ‌ ಎಲ್ಲ ಕಾರ್ಯಕ್ರಮಗಳು ರದ್ದಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ