ಶನಿವಾರಸಂತೆ ಆರೋಗ್ಯ ಕೇಂದ್ರದಲ್ಲಿ ಲಿಂಗವೇ ಇಲ್ಲದ ವಿಚಿತ್ರ ಮಗು ಜನನ

ಮಡಿಕೇರಿಇಲ್ಲಿನ ಶನಿವಾರ ಸಂತೆ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ವಿಚಿತ್ರ ರೂಪದ ಮಗುವೊಂದು ಜನಿಸಿದ್ದು, ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದೆ.
ಮಗುವಿಗೆ ಒಂದೇ ಕಾಲಿದ್ದು, ಗಂಡೋ-ಹೆಣ್ಣೋ ಎಂದು ತಿಳಿಯಲು ಯಾವುದೇ ನಿರ್ದಿಷ್ಟ ಅಂಗಗಳಿರಲಿಲ್ಲ.
ಚಂಗಢಳ್ಳಿ ಗ್ರಾಮದ ಭುವನಳ್ಳಿ ಗ್ರಾಮದ ಚಿನ್ನಮ್ಮ ಮತ್ತು ಮೂರ್ತಿ ದಂಪತಿಗಳ ಮಗು ಇದಾಗಿದ್ದು, ಗರ್ಭಾವಸ್ಥೆಯಲ್ಲಿದ್ದಾಗ ಹಾಸನದ ಖಾಸಗಿ ಆಸ್ಫತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿದ್ದೆವು. ಆಗ ಎಲ್ಲವೂ ಸಹಜವಾಗಿದೆ ಎಂದು ವರದಿ ನೀಡಲಾಗಿತ್ತು. ಆದರೆ ವರದಿಗೆ ವ್ಯತಿರಿಕ್ತವಾಗಿ ಇಂಥ ಮಗು ಜನಿಸಿದೆ ಎಂದು ಮೃತ ಮಗುವಿನ ತಂದೆ ಅಳಲು ತೋಡಿಕೊಂಡಿದ್ದಾರೆ.
ಸೋಮವಾರ ರಾತ್ರಿ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಪರಿಣಾಮ ಚಿನ್ನಮ್ಮ ಅವರನ್ನು ಶನಿವಾರಸಂತೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಾತ್ರಿ 10 ಗಂಟೆ ಸುಮಾರಿಗೆ ಹೆರಿಗೆಯಾಗಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ