ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷಗಳು ಇನ್ನಿಲ್ಲದ ಯೋಜನೆ ರೂಪಿಸುತ್ತಿದೆ. ಕಾಂಗ್ರೆಸ್ಗೆ ಗೆಲ್ಲಲೇಬೇಕಾದ ಒತ್ತಡವಿದ್ದರೆ, ಇತ್ತ ಬಿಜೆಪಿಯ ಎಲ್ಲಾ ಕೆಲಸ-ಕಾರ್ಯಗಳು ಚುನಾವಣೆಗೆ ಅಗ್ನಿ ಪರೀಕ್ಷೆಯಾಗಲಿದೆ. ಈ ಚುನಾವಣೆಯಲ್ಲಿ ಜಯಗಳಿಸಲು ಬಿಜೆಪಿ ಮಹಾಯಜ್ಞಕ್ಕೆ ಮುಂದಾಗಿದೆ.
ಸಚ್ಚಾಂದಿ ಮಹಾಯಜ್ಞದಲ್ಲಿ ಹನ್ನೆರಡಕ್ಕೂ ಹೆಚ್ಚಿನ ಮುಖ್ಯಮಂತ್ರಿಗಳು, ರಾಜ್ಯಪಾಲರು ಹಾಗೂ ಉನ್ನತ ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆ ಇದೆ. ಮಥುರಾ ಮೂಲದ ಮೋದಿ ಚಾರಿಟೇಬಲ್ ಟ್ರಸ್ಟ್ ಈ ಮಹಾಯಜ್ಞವನ್ನು ಸಂಘಟಿಸಿದೆ.
ಹತ್ತು ದಿನಗಳ ಈ ಸಚ್ಚಾಂದಿ ಮಹಾಯಜ್ಞ ಅಕ್ಟೋಬರ್ 10 ರಂದು ಆರಂಭವಾಗಲಿದೆ. ಲಕ್ಷಕ್ಕೂ ಅಧಿಕ ದೀಪ ಬೆಳಗಿಸಿ, ಮಂತ್ರ ಪಠಣದ ಮೂಲಕ ಈ ಯಜ್ಞ ನೆರವೇರಲಿದೆ ಎಂದು ಟ್ರಸ್ಟಿನ ಅಧ್ಯಕ್ಷ ಪವನ್ ಪಾಂಡೆ ತಿಳಿಸಿದ್ದಾರೆ.