ಬೆಂಗಳೂರಿನಲ್ಲಿ ತಿಂಡಿ ಹಬ್ಬ

ಬೆಂಗಳೂರು, ಅ.3- ನಗರದ ಜನತೆ ವಿಶೇಷ ತಿಂಡಿಗಳನ್ನು ಸವಿಯುತ್ತ ಈ ವಾರಾಂತ್ಯ ಕಳೆಯಲು ಮೂರು ದಿನಗಳ ತಿಂಡಿ ಹಬ್ಬ ಆಯೋಜನೆಗೊಂಡಿದೆ.
ವೀಕ್ಷಣಾ ವೆಂಚರ್ಸ್ ತಿಂಡಿ ಪ್ರಿಯರಿಗಾಗಿ ಈ ವಿಶೇಷ ಹಬ್ಬವನ್ನು ನಗರದ ಫ್ರೀಡಂಪಾರ್ಕ್‍ನಲ್ಲಿ ಹಮ್ಮಿಕೊಂಡಿದೆ. ತಿಂಡಿಪೆÇೀತರ ಹಬ್ಬ ಎಂಬ ಹೆಸರಿನಿಂದಲೇ ಆಯೋಜನೆಗೊಂಡಿರುವ ಈ ಉತ್ಸವದಲ್ಲಿ ನೂರಕ್ಕೂ ಹೆಚ್ಚು ಮಳಿಗೆಗಳು ನಗರದ ನಾಗರಿಕರ ತಿಂಡಿ ಆಸೆ ಪೂರೈಸಲಿದೆ.
ಒಂದು ಸಾವಿರಕ್ಕೂ ಅಧಿಕ ವಿಧದ ಸಸ್ಯಾಹಾರಿ ತಿಂಡಿಗಳು ಉತ್ಸವದಲ್ಲಿ ಸಿಗಲಿದ್ದು, ಉತ್ತರ ಹಾಗೂ ದಕ್ಷಿಣ ಭಾರತದ ವಿವಿಧ ಪ್ರಸಿದ್ಧ ಖಾದ್ಯಗಳು ಸೇರಿದಂತೆ ದೇಶೀಯ-ವಿದೇಶಿ ಶೈಲಿಯ ಖಾದ್ಯಗಳು ಸಿಗಲಿವೆ.
ಆಹಾರ ಪೆÇೀಲು ಮಾಡಬಾರದೆಂಬ ವಿಷಯದ ಬಗ್ಗೆ ಕಿರುಚಿತ್ರವನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತಿದ್ದು, ಉತ್ಸವದಲ್ಲಿ ಅನೇಕ ಸ್ಪರ್ಧೆಗಳನ್ನು ಆಯೋಜಿಸಿದ್ದು, ವಿಜೇತರಾದವರಿಗೆ ಬಹುಮಾನ ದೊರೆಯಲಿದೆ ಎಂದು ಕಿರುತೆರೆ ನಟ ಸಿಹಿ ಕಹಿ ಚಂದ್ರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಂಡಿಪೆÇೀತರ ಹಬ್ಬಕ್ಕೆ ಆಗಮಿಸುತ್ತಿದ್ದು, ಇದರೊಂದಿಗೆ ಬಹಳಷ್ಟು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ