ಬೆಂಗಳೂರು, ಅ.3- ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರ ಸಂಘ ಹಾಗೂ ನ್ಯಾಷನಲ್ ಮೂವ್ಮೆಂಟ್ ಫಾರ್ ಓಲ್ಡ್ ಪೆನ್ಷನ್ ಸ್ಕೀಮ್ ಸಂಘಟನೆಗಳ ನೇತೃತ್ವದಲ್ಲಿ ಎನ್ಪಿಎಸ್ ನೌಕರರು ಇಂದು ಹಳೆಯ ಪಿಂಚಣಿ ಯೋಜನೆಗೆ ಒತ್ತಾಯಿಸಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಂಘದ ಅಧ್ಯಕ್ಷ ಶಾಂತರಾಮ ಮಾತನಾಡಿ, 2006ರಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನಿಗದಿತ ಪಿಂಚಣಿ ರದ್ದುಗೊಳಿಸಿ ನೂತನ ಪಿಂಚಣಿ ಜಾರಿಗೊಳಿಸಲಾಗಿತ್ತು. ಆ ನಂತರ ಅನೇಕ ಹೋರಾಟಗಳನ್ನು ಕೈಗೊಂಡರೂ ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಆದ್ದರಿಂದ ಈ ಬಾರಿ ನೂತನವಾಗಿ ಹೋರಾಟ ಹ್ಮುಕೊಳ್ಳಲಾಗಿದೆ ಎಂದರು.
ಎನ್ಪಿಎಸ್ ಕೈಬಿಡುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರು. ಆದರೆ ಇದುವರೆಗೆ ಈ ಬಗ್ಗೆ ಯಾವುದೇ ನಿಲುವು ತಿಳಿಸಿಲ್ಲ. ಆದ್ದರಿಂದ ಅವರ ಗಮನ ಸೆಳೆಯಲು `ರಕ್ತ ಕೊಟ್ಟೇವು, ಪಿಂಚಣಿ ಬಿಡೆವು’ ಪ್ರತಿಭಟನೆ ಹ್ಮುಕೊಂಡಿದ್ದೇವೆ ಎಂದು ತಿಳಿಸಿದರು.
ಈ ವರ್ಷದ ಜ.2ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ 90 ಸಾರ ನೌಕರರು ನಡೆಸಿದ ಹೋರಾಟದ ಫಲವಾಗಿ ಮರಣ ಮತ್ತು ನಿವೃತ್ತಿ ಉಪಧನ ಹಾಗೂ ಕುಟುಂಬ ಪಿಂಚಣಿ ಯೋಜನೆ ಜಾರಿಯಾಗಿತ್ತು. ಅದರಲ್ಲೂ ಕೆಲವೊಂದು ಷರತ್ತುಗಳಿವೆ. ಈಗ ಸಂಪೂರ್ಣವಾಗಿ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ತಂದು, ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಪಟ್ಟು ಡಿದರು.
ಇದೇ ವೇಳೆ ರಕ್ತದಾನ ಶಿಬಿರ ನಡೆಯಿತು.