ನವದೆಹಲಿ: ಹಿರಿಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಸುಪ್ರೀಂ ಕೋರ್ಟ್ನ 46ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಇಂದು ಅಧಿಕಾರ ವಹಿಸಿಕೊಂಡರು.
ಮುಖ್ಯ ನ್ಯಾಯಮೂರ್ತಿಯಾಗಿದ್ದ ದೀಪಕ್ ಮಿಶ್ರಾ ಅಕ್ಟೋಬರ್ 2 ರಂದು ನಿವೃತ್ತರಾಗಲಿದ್ದು, 64 ವರ್ಷದ ಗೊಗೊಯ್ ಅಧಿಕಾರ ಅವಧಿ 2019 ರ ನವೆಂಬರ್ 18ಕ್ಕೆ ಕೊನೆಗೊಳ್ಳಲಿದೆ.
ನವೆಂಬರ್ 18, 1954 ರಲ್ಲಿ ಜನಿಸಿಸದ ಗೋಗೊಯ್ ನವೆಂಬರ್ 18ರಂದು ಜನಿಸಿದ್ದರು, 1978ರಲ್ಲಿ ಅಡ್ವೊಕೇಟ್ ಆಗಿ ಆಯ್ಕೆಯಾದ್ದ ಅವರು ಫೆಬ್ರವರಿ 28ರಂದು ಹರಿಯಾಣ ಹೈಕೋರ್ಟ್ ನ್ಯಾಯದೀಶರಾಗಿ ಆಯ್ಕೆಯಾಗಿದ್ದರು.
ಏಪ್ರಿಲ್ 23 ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದರು. ಈ ಹುದ್ದೆಯನ್ನು ಅಲಂಕರಿಸುತ್ತಿರುವ ಈಶಾನ್ಯ ರಾಜ್ಯಗಳ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅಸ್ಸಾಂನ ಗೊಗೊಯ್ ಪಾತ್ರರಾಗಿದ್ದಾರೆ.