ನಾಳೆಯಿಂದ ನಬಾರ್ಡ್ ಗ್ರಾಮೀಣ ಹಬ್ಬ

ಬೆಂಗಳೂರು, ಸೆ.27 (ಪಿಟಿಐ)- ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್(ನಬಾರ್ಡ್) ಸೆ.28 ರಿಂದ ಅ.7ರವರೆಗೆ ಉದ್ಯಾನಗರಿ ಬೆಂಗಳೂರಿನಲ್ಲಿ ನಬಾರ್ಡ್ ಗ್ರಾಮೀಣ ಹಬ್ಬ ಆಯೋಜಿಸಿದೆ.
ಇದು ತಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಕೃಷಿಕರು, ತೋಟಗಾರಿಕೆ ಉತ್ಪಾದಕರು, ನೇಕಾರರು, ಗ್ರಾಮೀಣ ಕುಶಲಕರ್ಮಿಗಳು, ಸ್ವಸಹಾಯ ಗುಂಪುಗಳು, ಗ್ರಾಮೀಣ ಉದ್ಯಮಿಗಳು, ವ್ಯವಸಾಯ ಉತ್ಪನ್ನ ಸಂಘಗಳಿಗೆ ನೆರವಾಗಲಿದ್ದು, ಅವರನ್ನು ಒಂದೇ ವೇದಿಕೆಯಲ್ಲಿ ಸೇರ್ಪಡೆ ಮಾಡಲಿದೆ.

ಜಯನಗರ 2ನೇ ಬ್ಲಾಕ್‍ನಲ್ಲಿರುವ ಅಶೋಕ ಪಿಲ್ಲರ್ ಸಮೀಪದ ಪ್ರೇಮಚಂದ್ರ ಸಾಗರ್ ಹಾಲ್‍ನಲ್ಲಿ ನಾಳೆಯಿಂದ ನಡೆಯುವ 10 ದಿನಗಳ ಗ್ರಾಮೀಣ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ನಬಾರ್ಡ್‍ನ ಕರ್ನಾಟಕ ಶಾಖೆಯ ಮುಖ್ಯ ಜನರಲ್ ಮ್ಯಾನೇಜರ್ ಪಿ.ವಿ.ಎಸ್.ಸೂರ್ಯಕುಮಾರ್ ನಾಳೆ ಮಧ್ಯಾಹ್ನ 12 ಗಂಟೆಗೆ ಉದ್ಘಾಟಿಸುವರು.
ಮೊಳಕಾಲ್ಮೂರು ಸೀರೆಗಳು, ಕಸೂತಿ ಎಂಬ್ರಾಯಿಡರಿ ಸೀರೆಗಳು, ಕೈಮಗ್ಗ ಬೆಡ್‍ಶೀಟ್‍ಗಳು, ಮರದ ಕರಕುಶಲ ಉತ್ಪನ್ನಗಳು, ಚನ್ನಪಟ್ಟಣ ಗೊಂಬೆಗಳು, ಬಾಳೆ ನಾರು ಉತ್ಪನ್ನಗಳು, ಸಿರಿಧಾನ್ಯಗಳು, ಶುಷ್ಕಫಲಗಳು, ಪರಿಸರ ಸ್ನೇಹಿ ತಟ್ಟೆ, ಲೋಟಗಳು, ಕೃತಕ ಆಭರಣಗಳು, ಹೈನುಗಾರಿಕೆ ಉತ್ಪನ್ನಗಳು, ಆಯುರ್ವೇದ ಪ್ರಸಾದನಗಳು ಇತ್ಯಾದಿ ವಸ್ತುಗಳು ಇಲ್ಲಿ ಪ್ರದರ್ಶನ ಮತ್ತು ಮಾರಾಟವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ