ಬೆಂಗಳೂರು: ದುನಿಯಾ ವಿಜಯ್ ಹಾಗೂ ಸಂಗಡಿಗರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 8ನೇ ಎಸಿಎಂಎಂ ನ್ಯಾಯಾಲಯ ತಿರಸ್ಕರಿಸಿತ್ತು. ತಮಗೆ ಜಾಮೀನು ಸಿಗದ ಹಿನ್ನೆಲೆ ದುನಿಯಾ ವಿಜಿ ಬೇಸರ ವ್ಯಕ್ತಪಡಿಸಿದ್ದರು.
ಇದೀಗ ಹೇಗಾದರೂ ಜಾಮೀನು ಪಡೆದೇ ತೀರಬೇಕು ಎಂಬ ಕಾರಣದಿಂದ ದುನಿಯಾ ವಿಜಯ್ ಇಂದು ಸೆಷನ್ಸ್ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ವಿಜಯ್ ತಮ್ಮ ವಕೀಲರ ಮೂಲಕ ಸೆಷನ್ಸ್ ಕೋರ್ಟಿನಲ್ಲಿ ಇಂದು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.
ದುನಿಯಾ ವಿಜಯ್, ಪ್ರಸಾದ್, ಮಣಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಲು ವಕೀಲರು ಸಿದ್ಧತೆ ಮಾಡಿಕೊಂಡಿದ್ದಾರೆ. ಆರೋಪಿಗಳು ಪ್ರಭಾವಿಗಳಾಗಿದ್ದು, ಸಾಕ್ಷ್ಯ ನಾಶಗೊಳಿಸುವ ಸಾಧ್ಯತೆ ಇದೆ ಎಂದು ನಿನ್ನೆ ಜಾಮೀನು ನಿರಾಕರಿಸಲಾಗಿತ್ತು. ಸೆಷನ್ಸ್ ಕೋರ್ಟ್ ವಿಜಯ್ಗೆ ಜಾಮೀನು ನೀಡುತ್ತಾ ಎನ್ನುವುದನ್ನು ಕಾದು ನೋಡಬೇಕು.