ಬೆಂಗಳೂರು, ಸೆ.26- ಮಹಿಳೆಯರ ಬಗ್ಗೆ ಅತಿಯಾದ ವ್ಯಾಮೋಹ ಬೆಳೆಸಿಕೊಂಡು ಅನೈತಿಕ ಚಟುವಟಿಕಗಳಲ್ಲಿ ತೊಡಗುತ್ತಿದ್ದ ಸ್ನೇಹಿತ ಹಾಗೂ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬನನ್ನು ಕತ್ತು ಕತ್ತರಿಸಿ ರುಂಡ-ಮುಂಡ ಬೇರ್ಪಡಿಸಿ ಭೀಕರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ನಾಲ್ವರನ್ನು ಆನೇಕಲ್ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಮೂಲತಃ ತಮಿಳುನಾಡಿನ ಕೇಶವ (32), ಹರೀಶ (29), ಯಶವಂತ (23), ಆನೇಕಲ್ ತಾಲೂಕಿನ ಸಂತೋಷ (26) ಬಂಧಿತ ಆರೋಪಿಗಳು.
ಮೂಲತಃ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲೂಕಿನ ತೋರಪಲ್ಲಿ ಅಗ್ರಹಾರ ನಿವಾಸಿಯಾದ ಮುನಿರಾಜು ರಿಯಲ್ ಎಸ್ಟೇಟ್ ಏಜೆಂಟ್ ಕೆಲಸ ಹಾಗೂ ಕಾರು ಚಾಲಕ ವೃತ್ತಿ ಮಾಡುತ್ತಿದ್ದನು.
ಮುನಿರಾಜು ಜತೆಯಲ್ಲಿ ಕೆಲಸ ಮಾಡುತ್ತಿದ್ದ ಕೇಶವ, ಹರೀಶ, ಯಶವಂತ, ಸಂತೋಷ ಸ್ನೇಹಿತರಾಗಿದ್ದು, ಹಣಕಾಸು ಹಂಚಿಕೆ ವಿಚಾರದಲ್ಲಿ ಇವರ ನಡುವೆ ವೈಷಮ್ಯ ಉಂಟಾಗಿತ್ತು.
ಕೇಶವನ ಕುಟುಂಬದ ಮಹಿಳೆಯರ ಜತೆ ಮುನಿರಾಜು ಅಸಭ್ಯವಾಗಿ ವರ್ತಿಸುತ್ತಿದ್ದರಿಂದ ಈತನ ಕೊಲೆಗೆ ಸ್ನೇಹಿತರೆಲ್ಲ ಸೇರಿ ಸಂಚು ರೂಪಿಸಿದ್ದರು.
ಅದರಂತೆ ಸೆ.15ರಂದು ಸಂಜೆ ಹೊಸೂರು ಪಟ್ಟಣದ ಬಾಗಲೂರು ಹೌಸಿಂಗ್ ಕಾಲೋನಿ ಬಳಿ ಇದ್ದ ಮುನಿರಾಜನನ್ನು ಬೃಂದಾವನ ಗಾರ್ಡನ್ ಒಳಭಾಗದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಚ್ಚಿನಿಂದ ಕತ್ತು ಕತ್ತರಿಸಿ ಕೊಲೆ ಮಾಡಿ ಪರಾರಿಯಾಗಿದ್ದರು.
ಮೂಲತಃ ತಮಿಳುನಾಡಿನವರಾದ ಮುನಿರಾಜು ನಾಪತ್ತೆಯಾದ ಬಗ್ಗೆ ಹೊಸೂರಿನ ಹುಡ್ಕೋ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ನಡುವೆ ಸೆ.17ರಂದು ವ್ಯಕ್ತಿಯೊಬ್ಬರ ಕತ್ತು ಕತ್ತರಿಸಿದ ಮೃತದೇಹ ಬೃಂದಾವನ ಲೇಔಟ್ನಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಆನೇಕಲ್ ಠಾಣೆ ಪೆÇಲೀಸರು ಮೃತ ವ್ಯಕ್ತಿಯ ಪೂರ್ವಾಪರ ವಿಚಾರಿಸಿ ಮಾಹಿತಿ ಕಲೆಹಾಕಿ ಕೊಲೆಯಾಗಿರುವ ವ್ಯಕ್ತಿ ತೋರಪಲ್ಲಿಯ ಮುನಿರಾಜು ಎಂಬುದನ್ನು ಪತ್ತೆಹಚ್ಚಿದ್ದರು.
ಬೆಂಗಳೂರು ಜಿಲ್ಲಾ ಪೆÇಲೀಸ್ ಅಧೀಕ್ಷಕ ಟಿ.ಪಿ.ಶಿವಕುಮಾರ್, ಅಪರ ಪೆÇಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ ಅವರು ಆನೇಕಲ್ ಉಪವಿಭಾಗದ ಡಿಎಸ್ಪಿ ಉಮೇಶ್ ಅವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಮಾಲತೇಶ್ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಹಣಕಾಸು ವಿಚಾರವಾಗಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿ ಹರೀಶನ ವಿರುದ್ಧ 2018ನೆ ಸಾಲಿನಲ್ಲಿ ಬಾಗಲೂರು ಠಾಣೆ ವ್ಯಾಪ್ತಿಯಲ್ಲಿ ಕಿಡ್ನಾಪ್ ಪ್ರಕರಣ, 2017ನೆ ಸಾಲಿನಲ್ಲಿ ಬಾಗಲೂರು ಬಳಿ ಹೊಸಹಳ್ಳಿ ಗಾರ್ಮೆಂಟ್ ಸಮೀಪ ಮಂಜುನಾಥ್ ಮತ್ತು ಭರತನನ್ನು ಕೊಲೆ ಮಾಡಿದ ಪ್ರಕರಣಗಳಲ್ಲಿ ಈತ ಹಾಗೂ ಮತ್ತೊಬ್ಬ ಆರೋಪಿ ಯಶ್ವಂತ್ ದೂರು ದಾಖಲಾಗಿದೆ.
ಮತ್ತೊಬ್ಬ ಆರೋಪಿ ಸಂತೋಷ್ ವಿರುದ್ಧ ಅತ್ತಿಬೆಲೆ ಠಾಣೆಯಲ್ಲಿ ಗೋಪಸಂದ್ರ ಗ್ರಾಮದ ಸಿದ್ದು ಎಂಬಾತನನ್ನು ಕೊಲೆ ಮಾಡಿದ ಪ್ರಕರಣ ದಾಖಲಾಗಿದೆ.