125 ವರ್ಷ ಇತಿಹಾಸದ ಕಾಂಗ್ರೆಸ್ ಗೆ ಯಾಕೆ ಈ ಸ್ಥಿತಿ ಬಂತು!

ಭೋಪಾಲ್(ಮಧ್ಯಪ್ರದೇಶ): ವೋಟ್ ಬ್ಯಾಂಕ್ ರಾಜಕಾರಣ ಭಾರತವನ್ನು ಗೆದ್ದಲು ಹುಳುವಿನಂತೆ ಕಿತ್ತು ತಿನ್ನುತ್ತಿದೆ. ಇಂದು ವೋಟ್ ಬ್ಯಾಂಕ್ ರಾಜಕೀಯದ ಬದಲಾಗಿ ಅಭಿವೃದ್ಧಿ ಬಗ್ಗೆ ಪ್ರತಿಯೊಬ್ಬರು ಮಾತನಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭೋಪಾಲ್ ನಲ್ಲಿ ಮಂಗಳವಾರ ಬಿಜೆಪಿ ಬೃಹತ್ ರಾಲಿ ಉದ್ದೇಶಿಸಿ ಮಾತನಾಡುತ್ತ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಸಬ್ ಕಾ ಸಾಥ್ ಸಬ್ ಕಾ ವಿಕಾಸ ಕೇವಲ ಭರವಸೆ ಅಲ್ಲ. ಇದು ಕೋಟ್ಯಂತರ ಭಾರತೀಯರನ್ನು ದೃಷ್ಟಿಯಲ್ಲಿರಿಸಿಕೊಂಡು ರೂಪಿಸಿದ ಯೋಜನೆಯಾಗಿದೆ. ಇದು ಎಲ್ಲರ ಅಭಿವೃದ್ಧಿಗೆ ಸರ್ಕಾರ ಕೈಗೊಂಡ ಮಹತ್ವಾಕಾಂಕ್ಷೆಯ ಯೋಜನೆಯ ಸ್ಲೋಗನ್ ಆಗಿದೆ ಎಂದರು.

125 ವರ್ಷ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಯಾಕೆ ಹೆಣಗಾಡುತ್ತಿದೆ ಎಂದು ವ್ಯಂಗ್ಯವಾಡಿದರು.

ವೋಟ್ ಬ್ಯಾಂಕ್ ರಾಜಕೀಯ ಭಾರತದಲ್ಲಿ ಗೆದ್ದಲು ಹುಳುವಿನಂತೆ ಕಿತ್ತು ತಿನ್ನುತ್ತಿದ್ದು, ಇಂತಹ ರಾಜಕೀಯವನ್ನು ಅಂತ್ಯಗೊಳಿಸುವುದು ಬಿಜೆಪಿಯ ಕರ್ತವ್ಯವಾಗಿದೆ ಎಂದು ಮೋದಿ ಹೇಳಿದರು.

ಭಾರತದಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಮೈತ್ರಿ ಮಾಡಿಕೊಳ್ಳಲು ವಿಫಲವಾಗಿದೆ..ಆದರೆ ಈಗ ವಿದೇಶದ ಜೊತೆ ಮೈತ್ರಿ ಮಾಡಿಕೊಳ್ಳಲು ಎದುರು ನೋಡುತ್ತಿದೆ ಎಂದು ರಾಫೇಲ್ ಡೀಲ್ ವಿವಾದದಕ್ಕೆ ಸಂಬಂಧಿಸಿದಂತೆ ಪರೋಕ್ಷವಾಗಿ ರಾಹುಲ್ ಗೆ ಟಾಂಗ್ ನೀಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ