ಯುನೈಟೆಡ್ ನೇಷನ್ಸ್: ಪಾಕಿಸ್ತಾನ ಒಂದೇ ಬಗೆಯ ತಂತ್ರಗಾರಿಕೆ ಅನುಸರಿಸಿ ಕಾಶ್ಮೀರ ವಿಷಯದಲ್ಲಿ ಮುಂದುವರಿಯುತ್ತಿದ್ದರೆ ನಾವು ಅದಕ್ಕೆ ತಕ್ಕ ಉತ್ತರ ನೀಡಲು ಸಮರ್ಥರಿದ್ದೇವೆ ಎಂದು ಯುಎನ್ ಭಾರತೀಯ ರಾಯಭಾರಿ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.
ಪಾಕಿಸ್ತಾನದ ‘ಟ್ರಿಕ್ ಪೋನಿ’ ತಂತ್ರಗಾರಿಕೆ ಕುರಿತು ನಮಗೆ ಗೊತ್ತಿದೆ.ಈ ಹಿಂದೆ ನಾವು ಅನೇಕ ಬಾರಿ ಈ ಕಾರ್ಯವನ್ನು ಮಾಡಿದ್ದೇವೆ, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನವು ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಒಂದು ಜಾಗತಿಕ ವೇದಿಕೆಯೆಂದು ಅಕ್ಬರುದ್ದೀನ್ ಹೇಳಿದ್ದಾರೆ.
ಪ್ರತಿ ದೇಶವೂ ಸಾರ್ವಭೌಮತ್ವದ್ದಾಗಿದೆ ಮತ್ತು ಅವರು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದಕ್ಕೆ ಬದ್ದವಾಗಿರಬೇಕು ಎಂದರು.
ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಉನ್ನತ ಮಟ್ಟದ ಯುಎನ್ ಜನರಲ್ ಅಸೆಂಬ್ಲಿ ಅಧಿವೇಶನದಲ್ಲಿ ಈ ವಾರ ಪಾಲ್ಗೊಳ್ಳುತ್ತಿದ್ದು ಅವರು 30 ರಾಷ್ಟ್ರಗಳ ಮುಖಂಡರು ಮತ್ತು ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳುವವರ ಜತೆ ಮಾತುಕತೆ ನಡೆಸಲಿದ್ದಾರೆ. ಆದಾಗ್ಯೂ, ಸುಷ್ಮಾ ಸ್ವರಾಜ್ ಮತ್ತು ಖುರೇಷಿ ಇಬ್ಬರೂ ಸಹ ದಕ್ಷಿಣ ಏಷ್ಯಾದ ಅಸೋಸಿಯೇಷನ್ ಫಾರ್ ರೀಜನಲ್ ಕೋಪರೇಷನ್ (ಸಾರ್ಕ್) ಸಭೆಗಳಲ್ಲಿ ಒಂದೇ ವೇದಿಕೆಯಲ್ಲಿರಲಿದ್ದಾರೆ.