ನಾಪತ್ತೆಯಾದ ಸರ್ಕಾರದ ಕಡತಗಳ ಬಗ್ಗೆ ಸಾರ್ವಜನಿಕರು ಪೆÇಲೀಸರಿಗೆ ದೂರು ನೀದಬಹುದು

ಬೆಂಗಳೂರು, ಸೆ.23- ನಾಪತ್ತೆಯಾದ ಸರ್ಕಾರದ ಕಡತಗಳು, ದಾಸ್ತಾವೇಜುಗಳ ಬಗ್ಗೆ ಸಾರ್ವಜನಿಕರು ಪೆÇಲೀಸರಿಗೆ ದೂರು ನೀಡಿ ಎಫ್‍ಐಆರ್ ದಾಖಲಿಸಬಹುದು ಎಂದು ನವದೆಹಲಿಯ ಸಿಎಚ್‍ಆರ್‍ಐನ ವೆಂಕಟೇಶ್‍ನಾಯಕ್ ತಿಳಿಸಿದರು.
ಮಾಹಿತಿ ಹಕ್ಕು ಅಧ್ಯಯನ ಕೇಂದ್ರ, ಕರ್ನಾಟಕ ಮಾಹಿತಿ ಆಯೋಗದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕರ್ನಾಟಕ ಸಾರ್ವಜನಿಕ ದಾಖಲೆಗಳ ಅಧಿನಿಯಮದ ಅನುಷ್ಠಾನ-ಒಂದು ಸವಾಲು ಕುರಿತ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈವರೆಗೂ ಸರ್ಕಾರಿ ಕಡತಗಳು ಕಾಣೆಯಾಗಿರುವುದು ಸಾಕಷ್ಟು ಕಂಡುಬಂದಿವೆ. ಇಂತಹ ಸಂದರ್ಭಗಳಲ್ಲಿ ಕಡತಗಳ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿಗಳು ಕಡತ ನಾಪತ್ತೆಯಾದ ಬಗ್ಗೆ ಎಫ್‍ಐಆರ್ ದಾಖಲಿಸಲು ಸಾಧ್ಯವಿತ್ತು. ಇದು ಬಿಟ್ಟರೆ ಮಾಹಿತಿ ಆಯೋಗದಿಂದ ದೂರು ನೀಡಬಹುದಾಗಿತ್ತು. ಆದರೆ, ಇತ್ತೀಚೆಗೆ ದೆಹಲಿ ಹೈಕೋರ್ಟ್ ಪ್ರಕರಣವೊಂದರಲ್ಲಿ ಸ್ಪಷ್ಟ ಸೂಚನೆ ನೀಡಿ ಸರ್ಕಾರದ ಕಡತಗಳು ಸರ್ಕಾರದ ಆಸ್ತಿ. ಅದು ಕಳೆದುಹೋದ ಸಂದರ್ಭದಲ್ಲಿ ಮಾಹಿತಿ ಇದ್ದರೆ ಸಾರ್ವಜನಿಕರು ನೇರವಾಗಿ ದೂರು ದಾಖಲಿಸಬಹುದು ಎಂದು ಸ್ಪಷ್ಟಪಡಿಸಿದರು.

ಇನ್ನು ಮುಂದೆ ಕಡತಗಳ ಬಗ್ಗೆ ಆರ್‍ಟಿಐ ಮೂಲಕ ಮಾಹಿತಿ ಕೇಳಿದಾಗ ಅದು ಕಾಣೆಯಾಗಿರುವ ಬಗ್ಗೆ ತಿಳಿದು ಬಂದಲ್ಲಿ ಅದರ ಮಾಹಿತಿ ಪಡೆದು ದೂರು ನೀಡಲು ಸಾಧ್ಯವಿದೆ. ಮೊದಲೆಲ್ಲಾ ಆರ್‍ಟಿಐನಲ್ಲಿ ಮಾಹಿತಿ ಕೇಳಿದಾಗ ಮಾಹಿತಿ ಕೊಡಲಾಗದೆ ಅಥವಾ ಬಹಿರಂಗಪಡಿಸಲಾಗದೆ ಅವುಗಳನ್ನು ನಾಶ ಮಾಡಿ ನಾಪತ್ತೆಯಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಈ ಬಗ್ಗೆಯೂ ತಾವು ಮಾಹಿತಿ ಕೊಡಲಾಗದ ಹಾಗೂ ಬಹಿರಂಗಪಡಿಸಲಾಗದ ಕಡತಗಳಾವುವು ಎಂಬುದರ ಬಗ್ಗೆಯೂ ಆರ್‍ಟಿಐನಲ್ಲಿ ಪ್ರಶ್ನಿಸಿದ್ದೇವೆ ಎಂದು ವಿವರಿಸಿದರು.
ಸರ್ಕಾರಿ ಅಧಿಕಾರಿಗಳು ಕಡತಗಳ ಮಾಹಿತಿ ಕೊಡದೇ ಇರಲು ಪ್ರಯತ್ನಿಸುತ್ತಾರೆ. ರಕ್ಷಣಾತ್ಮಕ ಹಾಗೂ ಗೌಪ್ಯ ವಿಷಯ ಎಂದು ಹೇಳಿ ಜಾರಿಕೊಳ್ಳುತ್ತಾರೆ. ಹಾಗಾಗಿಯೇ ಈ ಬಗ್ಗೆ ಪ್ರಶ್ನಿಸಿದ್ದೇನೆ.

ಕಡತಗಳ ನಾಶ ಪಡಿಸುವುದು ಒಂದು ಅಪಾಯಕಾರಿ ಬೆಳವಣಿಗೆ. ಕಡತಗಳ ಯಜ್ಞ (ವಿನಾಶ) ಮಾಡಿದಂತಹ ಸಂದರ್ಭಗಳು ಬಹಳಷ್ಟಿವೆ. ಹಾಗಾಗಿ ಇದೀಗ ಕಡತ ನಾಪತ್ತೆಯಾಗಿದೆ ಎಂದರೆ ಆ ಬಗ್ಗೆ ಸಾರ್ವಜನಿಕರು ಸಹ ಎಫ್‍ಐಆರ್ ದಾಖಲಿಸಲು ಅವಕಾಶ ನೀಡಿರುವುದು ಒಳ್ಳೆಯ ಬೆಳವಣಿಗೆ ಎಂದು ಅಭಿಪ್ರಾಯಪಟ್ಟ ಅವರು, ಇನ್ನು ಮುಂದೆ ಅಧಿಕಾರಿಗಳು ನೀವು ಕೇಳುವ ಕಡತ ಇಲ್ಲ ಎಂದು ಹೇಳಲು ಬರುವುದಿಲ್ಲ ಎಂದರು.
ಸರ್ಕಾರಿ ವ್ಯವಸ್ಥೆಯಲ್ಲಿ ಎಲ್ಲಾ ಸಚಿವರಿಗೂ ಒಂದೊಂದು ಜವಾಬ್ದಾರಿಯುತ ಕೆಲಸ ಇರುತ್ತದೆ. ಪ್ರತೀ ಸಚಿವರಿಗೂ ಅವರವರ ಖಾತೆ ನಿರ್ವಹಿಸುವ ಜವಾಬ್ದಾರಿ ಇರುತ್ತದೆ. ಹಣಕಾಸು ಸಚಿವರಿಗೆ ಇಂತಹ ಯಾವುದೇ ಜವಾಬ್ದಾರಿ ಇಲ್ಲ. ಆದರೆ, ಅವರು ಎಲ್ಲಾ ಇಲಾಖೆಗಳ ಖರ್ಚು, ವೆಚ್ಚದ ಕಡತವನ್ನು ಪರಿಶೀಲಿಸುವ ಅವಕಾಶವಿದೆ. ಆದರೂ ಇತ್ತೀಚಿನ ಹಣಕಾಸು ಸಚಿವರು ಯಾವುದೇ ಕಡತಗಳನ್ನು ಪರಿಶೀಲಿಸಿಲ್ಲ ಎಂದರೆ ಇದರ ಪರಿಣಾಮ ಸಾರ್ವಜನಿಕರ ವಿವೇಚನೆಗೆ ಬಿಡುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.

ಕೇಂದ್ರ ಮಾಹಿತಿ ಆಯೋಗದ ಮಾಜಿ ಆಯುಕ್ತ ಶೈಲೇಸ್‍ಗಾಂಧಿ ಮಾತನಾಡಿ, ಮಾಹಿತಿ ಕೋರಿ ಬಹಳಷ್ಟು ಕಾಗದ ಪತ್ರಗಳು ಬರುತ್ತವೆ. ಅದನ್ನು ಕಾಗದ ಪತ್ರಗಳ ಮೂಲಕವೇ ದಾಖಲೆ ನೀಡಬೇಕಾದ್ದರಿಂದ ಸಾಕಷ್ಟು ವಿಳಂಬವಾಗುತ್ತಿದೆ. ಎಲ್ಲಾ ಇಲಾಖೆಗಳು ಡಿಜಿಟಲೀಕರಣಕ್ಕೆ ಒಳಗಾಗಿರುವುದರಿಂದ ಡಿಜಿಟಲ್ ಮಾದರಿಯಲ್ಲೇ ಏಕೆ ಮಾಹಿತಿ ನೀಡಬಾರದು. ಇದರಿಂದ ಶೀಘ್ರದಲ್ಲೇ ಮಾಹಿತಿ ಒದಗಿಸಲು ಸಾಧ್ಯ. ಈ ನಿಟ್ಟಿನಲ್ಲಿ ಅಗತ್ಯವಿರುವ ಬದಲಾವಣೆ ಅಳವಡಿಸಿಕೊಂಡು ಇಲಾಖೆಗಳು ಮುಂದುವರೆಯಬೇಕೆಂದು ಸಲಹೆ ನೀಡಿದರು.
ವಿಚಾರ ಸಂಕಿರಣದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತ ಎಲ್.ಕೃಷ್ಣಮೂರ್ತಿ, ಮಾಜಿ ಕಾರ್ಮಿಕ ಸಚಿವ ಎಸ್.ಕೆ.ಕಾಂತ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ