ಬೆಂಗಳೂರು, ಸೆ.18- ಬಡಗನಾಡು ಸಂಘ ಇತಿಹಾಸದಲ್ಲೇ ಪ್ರಪ್ರಥಮಬಾರಿಗೆ ಮಹಿಳಾ ಸಮಾವೇಶವನ್ನು ಬಹಳ ವಿಜೃಂಭಣೆಯಿಂದ ನಡೆಸಿತು.
ಗೌರವಾಧ್ಯಕ್ಷ ಜಿ.ಎಸ್.ನಾಗೇಶ್ ಸಮಾವೇಶಕ್ಕೆ ಚಾಲನೆ ನೀಡಿದರು. ಸವಿತಾನಾಗೇಶ್, ಉಪಾಧ್ಯಕ್ಷೆ ಮಾಣಿಕ್ಯ ಶ್ರೀಧರ್, ನಟಿ ಸಿಹಿಕಹಿ ಗೀತಾ, ವಿಭು ಅಕಾಡೆಮಿಯ ಡಾ.ವಿ.ಬಿ.ಆರತಿ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿದ್ದು.
ಬಾಲ್ಯದಲ್ಲಿ ಆಡಿದ ಆಟೋಟಗಳು, ಸ್ಟಾಲ್ ಹಾಕಿದ ನೆನಪು, ಜಿ.ಕೆ.ಗುಂಡೂರಾಯರಿಂದ ಬಹುಮಾನ ಪಡೆದ 50 ರೂ.ಗಳು, ಇನ್ನೂ ಹಲವಾರು ನೆನಪುಗಳನ್ನು ಸಿಹಿಕಹಿ ಗೀತಾ ನೆನಪಿಸಿಕೊಂಡರು.
ಎಲ್ಲಾ ಹಿರಿಯ ಮಹಿಳೆಯರೂ ಇದರಿಂದ ಆನಂದಭರಿತರಾಗಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರನ್ನು ಹರಸಿ ಸಂಘ ಹೀಗೆ ಬೆಳೆಯಲೆಂದು ಆಶಿಸಿದರು. ಸಂಘದ ಏಳಿಗೆಗಾಗಿ ದುಡಿದ ಮಹಿಳೆಯರಿಗೆ, ಸಂಘದ ಪ್ರಪ್ರಥಮ ಕಾರ್ಯಕಾರಿಣಿ ಸಮಿತಿಯ ಮಹಿಳೆ, ಬಡಗನಾಡು ಸಾಧಕ ಮಹಿಳೆಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಇ
ಸಂಘಟನಾ ಕಾರ್ಯದರ್ಶಿ ಸರಸ್ವತಿ ಮೂರ್ತಿ, ಜ್ಯೋತಿ ಮೋಹನ್, ವಿಜಯಾ ಚಿದಾನಂದ್, ಉಮಾಪ್ರಸನ್ನಕುಮಾರ್, ಚಂಪಕಾಶ್ರೀನಿವಾಸ್, ಸಂಘದ ಕಾರ್ಯದರ್ಶಿ ಎನ್. ಎಲ್. ಚಿದಾನಂದ್, ಖಜಾಂಚಿ ಎಸ್. ವಿ. ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.