ಬೆಂಗಳೂರು, ಸೆ.18- ಕಾಗದಗಳ ಉತ್ಪಾದನಾ ಪದ್ಧತಿಗಳ ಕುರಿತು ಸಾಕಷ್ಟು ಜನ ಜಾಗೃತಿ ಮೂಡಿಸಿದ ನಂತರ, ಜೆಕೆ ಆರ್ಗನೈಜೇಷನ್ನ ಅಂಗ ಸಂಸ್ಥೆಯಾಗಿರುವ ಜಿಕೆ ಪೇಪರ್ ಮರಳಿ ಮಣ್ಣಿಗೆ ಅಭಿಯಾನ ಎಂಬ ವಿನೂತನ ಹೊಸತನದ ಪ್ರಯೋಗವನ್ನು ಆರಂಭಿಸಿದೆ.
ನಗರದ ಭವನ್ ಪ್ರೆಸ್ ಸ್ಕೂಲ್ ಆವರಣದಲ್ಲಿ ಚಾಲನೆ ದೊರೆತಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಈ ಹಸಿರು ಜಾಗೃತಿ ಅಭಿಯಾನ ಆರಂಭಿಸಲಾಗಿದೆ. ಪರಿಸರ ಕಲುಷಿತಗೊಳ್ಳುತ್ತಿರುವ ರೀತಿ, ಮರಗಳನ್ನು ಉಳಿಸಿಕೊಳ್ಳುವ ಬಗೆ, ಹೊಸ ಗಿಡಗಳನ್ನು ನೆಡುವುದು ಹಾಗೂ ಕಾಗದ ಉತ್ಪಾದನೆಯಲ್ಲಿ ಪರಿಸರ ಸ್ನೇಹಿ ಸ್ವಭಾವ ಹಾಗೂ ಬಳಕೆಯ ಕುರಿತು ಪರಸ್ಪರ ವಿದ್ಯಾರ್ಥಿಗಳೇ ಸಂವಹನ ನಡೆಸಿ ಪರಿಹಾರ ಹುಡುಕುವ ವಿನೂತನ ಪ್ರಯತ್ನಇಲ್ಲಿ ನಡೆಯಿತು.
ಈ ಅಭಿಯಾನದ ಭಾಗವಾಗಿ ಮಕ್ಕಳು ಗಿಡದ ಬೀಜಗಳನ್ನು ಒಳಗೊಂಡ ಪೆನ್ಸಿಲ್ ಬಳಸುವ, ಸ್ನೇಹಿತರು, ಅಕ್ಕಪಕ್ಕದವರಿಗೆ ನೆಡಬಹುದಾದ ಬೀಜಗಳನ್ನು ಒಳಗೊಂಡ ಪೆÇೀಸ್ಟ್ಕಾರ್ಡ್ಗಳನ್ನು ವಿತರಿಸುವಕಾರ್ಯ ಮಾಡಲಿದ್ದಾರೆ.
ಪೆನ್ಸಿಲ್ ಹಾಗೂ ಪೆÇೀಸ್ಟ್ಕಾರ್ಡ್ಗಳು ತುಳಸಿ ಹಾಗೂ ಚಂಡು ಹೂವಿನ ಬೀಜಗಳ ಎರಡು ಸೆಟ್ಗಳನ್ನು ಒಳಗೊಂಡಿರುತ್ತವೆ. ಪೆನ್ಸಿಲ್ಗಳು ಕೂಡ ಮಣ್ಣಿನಲ್ಲಿಕರಗಬಲ್ಲ ಗುಣ ಹೊಂದಿದ್ದು, ಇದರಲ್ಲಿಟೊಮೆಟೊಗಿಡದ ಬೀಜಗಳು ಇರಲಿವೆ.
ಪೆನ್ಸಿಲ್ ಬಳಕೆಯ ನಂತರ ಅದರಇ ನ್ನೊಂದು ಕೊನೆಯಲ್ಲಿ ಅಳವಡಿಸಿರುವ ಬೀಜವನ್ನು ಪಾಟ್ಗಳಲ್ಲಿ ನಾಟಿ ಮಾಡಿ ಬೆಳೆಸಬಹುದಾಗಿದೆ. ಮುಂದಿನ ಎರಡು ವಾರದಲ್ಲಿ ಬೆಂಗಳೂರಿನ ನಾನಾ ಮನೆಗಳಿಗೆ 20 ಸಾವಿರ ಗಿಡಗಳ ಬೀಜವನ್ನುರವಾನೆ ಮಾಡುವುದು ಈ ಅಭಿಯಾನದ ಹಿಂದಿರುವ ಉದ್ದೇಶವಾಗಿದೆ.ಯೋಜನೆಯ ಭಾಗವಾಗಿಜೆಕೆ ಪೇಪರ್ 300 ಗಿಡಗಳನ್ನು ವಿವಿಧ ಶಾಲೆಗಳಿಗೆ ಉಚಿತವಾಗಿ ವಿತರಿಸಲಿದೆ.ಅವರು ಶಾಲಾ ಆವರಣದಲ್ಲಿ ಬೆಳೆಸಿಕೊಳ್ಳಲು ಉತ್ತೇಜಿಸಲಿದೆ.
ಜೆಕೆ ಪೇಪರ್ ಪೇಪರ್ಗಾಗಿ ಬಳಕೆ ಮಾಡುವ ಒಂದು ಮರದ ಬದಲಿಯಾಗಿ ಐದು ಮರಗಳನ್ನು ಬೆಳೆಸುವ ಕಾರ್ಯ ಮಾಡುತ್ತಾ ಬಂದಿದೆ. ಈ ಮೂಲಕ ದೇಶದಲ್ಲಿ ಹಸಿರು ಪ್ರದೇಶ ಹೆಚ್ಚಿಸುವ ಕಾರ್ಯಕ್ಕೆ ಕೊಡುಗೆ ನೀಡುತ್ತಿದೆ ಎಂದು ಜೆಕೆ ಪೇಪರ್ನ ಮಾರುಕಟ್ಟೆ ಹಾಗೂ ಮಾರಾಟ ವಿಭಾಗದ ಉಪಾಧ್ಯಕ್ಷ ಸಂತೋಷ್ ವಕ್ಲೂ ತಿಳಿಸಿದ್ದಾರೆ.