12ನೇ ಆವೃತ್ತಿಯ ಬಿಗ್ ಬಾಸ್ ಮನೆಗೆ ಶ್ರೀಶಾಂತ

ಮುಂಬೈ: ನಟ ಸಲ್ಮಾನ್ ನಿರೂಪಣೆಯಲ್ಲಿ ಬಿಗ್ ಬಾಸ್ 12ನೇ ಆವೃತ್ತಿಯ ಮೊನ್ನೆ ಸೋಮವಾರ ಅದ್ದೂರಿಯಾಗಿ ಆರಂಭ ಪಡೆದಿದೆ.
ಶೋನ ಮೊದಲ ದಿನ ಎಲ್ಲ ಸ್ಪರ್ಧಿಗಳು ಭರ್ಜರಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದರು. ಕೊನೆಯ ಸ್ಪರ್ಧಿಯಾಗಿ ಟೀಂ ಇಂಡಿಯಾದ ಮಾಜಿ ವೇಗಿ ಎಸ್.ಶ್ರೀಶಾಂತ್ ಬಿಗ್ ಬಾಸ್ ಮನೆ ಪ್ರವೇಶಿಸಿದ್ದು ಎಲ್ಲರ ಗಮನ ಸೆಳಯಿತು.
ಬಿಗ್ ಬಾಸ್ ಸ್ಪರ್ಧಿಯಾಗಿ ಬರುವ ಕುರಿತು ಮಾತನಾಡಿರುವ ಅವರು ಬಿಗ್ ಬಾಸ್ ಶೋ ಚೆನ್ನಾಗಿದೆ. ಇದರಲ್ಲಿ ಏನು ಮುಚ್ಚಿಟ್ಟುಕೊಳ್ಳುವಂತಿಲ್ಲ.

2011ರಲ್ಲಿ ನಾನು ಇಲ್ಲಿಗೆ ಬರಬೇಕಿತ್ತು. ಆದರೆ ಸಾಧ್ಯವಾಗಿರಲಿಲ್ಲ. ನನ್ನ ಕ್ರಿಕೆಟ್ ಬದುಕು ಹಾಳಾಯಿತು. ಆದರೆ ನನ್ನ ಕಲಾತ್ಮಕ ಬದುಕು ಅನಾವರಗೊಳ್ಳುತ್ತಿದೆ. ನಾನು ನಾಲಕು ಸಿನಿಮಾಗಳನ್ನ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ