ಹುಬ್ಬಳ್ಳಿ: ಕರ್ನಾಟಕದ ಕಾಶ್ಮೀರ ಎಂದು ಖ್ಯಾತಿ ಪಡೆದಿರುವ ಸಂಡೂರ ಗುಡ್ಡಗಳ ಸಂರಕ್ಷಿಸಿ ಪರಿಸರ ಹಾನಿ ಹಾಗೂ ಜೀವವೈವಿಧ್ಯ ಸಂರಕ್ಷಣೆ ಮಾಡಬೇಕೆಂದು ಸಮಾಜಿಕ ಪರಿವರ್ತನಾ ಸಮಿತಿಯ ಎಸ್.ಆರ್.ಹಿರೇಮಠ ಹಾಗೂ ರಾಘವೇಂದ್ರ ಕುಷ್ಟಗಿ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದ ಅವರು, ಪಶ್ಚಿಮ ಘಟ್ಟಗಳ ರೀತಿಯಲ್ಲಿ ಸಂಡೂರಿನ ಗುಡ್ಡಗಳು ಜೀವ ವೈವಿಧ್ಯತೆ, ಸಸ್ಯ ಪ್ರಬೇಧ ಹಾಗೂ ಹಲವಾರು ಜಾತಿಯ ಔಷಧಿ ಸಸ್ಯಗಳನ್ನು ಹೊಂದಿದ್ದು ಶೀಘ್ರವೇ ಸಂರಕ್ಷಣಾ ಕ್ರಮ ಜಾರಿಗೊಳಿಸಬೇಕು ಎಂದರು.
ಕಪ್ಪತ್ತಗುಡ್ಡ ಸಂರಕ್ಷಿಸಲು ಎನ್.ಸಿ.ಪಿ.ಎನ್.ಆರ್ ಹಾಗೂ ಸಮಾನ ಮನಸ್ಕ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸುತ್ತಿವೆ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಕೊಡಗು ಹಾಗೂ ಕೇರಳದಲ್ಲಿ ಆದ ಭೂಕುಸಿತಕ್ಕೆ ಪರಿಸರ ನಾಶವೇ ಮೂಲಕಾರಣವಾಗಿದೆ ಈ ಹಿನ್ನೆಲೆಯಲ್ಲಿ ದೂರದೃಷ್ಟಿಕೋ ಇಟ್ಟುಕೊಂಡು ಆಕ್ರಮ ಗಣಿಗಾರಿಕೆಯಿಂದ ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ ಸಂರಕ್ಷಣೆ ಮಾಡಬೇಕು ಎಂದರು. ಪರಿಸರ ನಾಶದಿಂದಾಗಿ ಜನರ ಆರೋಗ್ಯ, ಕುಡಿಯುವ ನೀರು, ಕೃಷಿ, ಪಶುಸಂಗೋಪನೆ ಮೇಲೆ ಹಲವಾರು ದುಷ್ಪರಿಣಾಮಗಳು ಬೀರುತ್ತಿದೆ ಎಂದರು. ಅಲ್ಲದೇ ಪ್ರಜಾಪ್ರಭುತ್ವದ ಸಂರಕ್ಷಣೆಗಾಗಿ ಜನಸಂಗ್ರಾಮ ಸದನದಿಂದ ರಾಣೆಬೆನ್ನೂರಿನಲ್ಲಿ ಅಕ್ಟೋಬರ್ 20-21ರಂದು ಎರಡು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಮತ್ತು ಕಪ್ಪತ್ತಗುಡ್ಡ ಸಂರಕ್ಷಣೆಗಾಗಿ ಅಕ್ಟೋಬರ್ 6-7ರಂದು 2ದಿನದ ಕಾರ್ಯಗಾರವನ್ನು ಕೂಡ ಆಯೋಜಿಸಲಾಗಿದೆ ಎಂದರು.