ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡಿ ಗಮನ ಸೆಳೆದ ತಮೀಮ್ ಇಕ್ಬಾಲ್

ದುಬೈ:ಬಾಂಗ್ಲ ದೇಶ ತಂಡದ ಓಪನರ್ ತಮೀಮ್ ಇಕ್ಬಾಲ್ ಏಷ್ಯಾಕಪ್‍ನ ಉದ್ಘಾಟನಾ ಪಂದ್ಯದಲ್ಲಿ ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡಿ ಸರ್‍ಪ್ರೈಸ್ ನೀಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಬಾಂಗ್ಲಾ ತಂಡದ ತಮೀಮ್ ಇಕ್ಬಾಲ್ ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಲಕ್ಮಲ್ ಎಸೆತದಲ್ಲಿ ಕೈಬೆರೆಳಿಗೆ ಚೆಂಡಿನಿಂದ ಗಾಯ ಮಾಡಿಕೊಂಡರು. ತಕ್ಷಣವೆ ಮೈದಾನದಿಂದ ಹೊರ ನಡೆದರು. ನಂತರ 47ನೇ ಓವರ್‍ನಲ್ಲಿ ಮತ್ತೆ ಕ್ರಿಸ್‍ಗಿಳಿದು ಅಚ್ಚರಿ ಮೂಡಿಸಿದ್ರು. ಆಡಲು ಆಗದ ಪರಿಸ್ಥಿಯಲ್ಲೂ ಎಡಗೈ ಬ್ಯಾಟ್ಸ್‍ಮನ್ ತಮೀಮ್ ಇಕ್ಬಾಲ್ ಒಂದೇ ಕೈಯಲ್ಲಿ ಆಡಿ ಕ್ರಿಕೆಟ್ ಅಭಿಮಾನಿಗಳಿಂದ ಶಾಬ್ಬಾಸ್‍ಗಿರಿ ಪಡೆದರು. ಈ ಹಿಂದೆ ಇಂಥದ್ದೆ ಪರಿಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡಿದ್ದರು. ತಮೀಮ್ ಇಕ್ಬಾಲ್ ಗಾಯಮಾಡಿಕೊಂಡಿರೋದ್ರಿಂದ ತಮಡದಿಂದ ಹೊರ ನಡೆದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ