ನವದೆಹಲಿ: ಪೆಟ್ರೋಲ್-ಡೀಸೆಲ್ ದರ ಏರಿಕೆ ಖಂಡಿಸಿ ಭಾರತ್ ಬಂದ್ ನಡೆಸಲಾಗುತ್ತಿದ್ದರೆ ಇನ್ನೊಂದೆಡೆ ಇಂಧನ ದರ ಮತ್ತೆ ಏರಿಕೆಯಾಗಿದೆ.
ಇಂಧನ ದರವನ್ನು ಜಿಎಸ್ಟಿ ಅಡಿಯಲ್ಲಿ ತರಬೇಕು ಇಲ್ಲವಾದಲ್ಲಿ ಭಾರತ್ ಬಂದ್ ಮಾಡುವುದಾಗಿ ಕಾಂಗ್ರೆಸ್, ಕೇಂದ್ರ ಸರ್ಕಾರವನ್ನು ಎಚ್ಚರಿಸಿತ್ತು. ಸುಮಾರು 20 ರಾಜಕೀಯ ಪಕ್ಷಗಳು ಬಂದ್ಗೆ ಬೆಂಬಲ ಸೂಚಿಸಿದ್ದು,ದೇಶಾದ್ಯಂತ ಭಾರತ್ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಪ್ರತಿಭಟನೆಗಳು ಭುಗಿಲೆದ್ದಿವೆ. ಈ ನಡುವೆ ಪೆಟ್ರೋಲ್-ಡೀಸೆಲ್ ದರದಲ್ಲಿ ಭಾರೀ ಏರಿಕೆಯಾಗಿದೆ.
ಪ್ರತಿ ಲೀಟರ್ ಪೆಟ್ರೋಲ್ಗೆ 0.23 ಪೈಸೆ ಹಾಗೂ ಡೀಸೆಲ್ಗೆ 0.22 ಪೈಸೆ ಏರಿಕೆ ಕಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 80.73 ರೂ. ಇದ್ದು, ಡೀಸೆಲ್ಗೆ 72.83 ರೂ. ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 88.12 ರೂ. ಇದ್ದು, ಡೀಸೆಲ್ಗೆ 77.32 ರೂ. ಗೆ ಏರಿಕೆಯಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ತೈಲ ದರ ಬಿಸಿ ತಟ್ಟಿದ್ದು, ಡೀಸೆಲ್ ಪ್ರತಿ ಲೀಟರ್ಗೆ 75.23 ರೂ. ಹಾಗೂ ಪೆಟ್ರೋಲ್ 83 .43 ರೂ. ದಾಖಲೆಯ ಏರಿಕೆ ಕಂಡಿದೆ.