ನವದೆಹಲಿ: ಟ್ರಿಪಲ್ ಜಂಪರ್ ಅರ್ಪಿಂದರ್ ಸಿಂಗ್ ಕಂಚಿನ ಪದಕ ಗೆಲ್ಲುವ ಮೂಲಕ ಪ್ರತಿಷ್ಠಿತ ಐಎಎಎಫ್ ಕಾಂಟಿನೆಂಟಲ್ ಕಪ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಗೌರವಕ್ಕೆ ಪಾತ್ರರಾಗಿ ಹೊಸ ಇತಿಹಾಸ ಬರೆದಿದ್ದಾರೆ.
ಕಳೆದ 2010ರಿಂದ ಈ ಕ್ರೀಡಾಕೂಟದಲ್ಲಿ ಇದುವರೆಗೂ ಭಾರತದÀ ಯಾವ ಅಥ್ಲೀಟ್ಗಳು ಒಂದೇ ಒಮದು ಪದಕ ಗೆದ್ದಿರಲ್ಲಿಲ್ಲ. 25 ವರ್ಷದ ಅರ್ಪಿಂದರ್ ಸಿಂಗ್ 16. 59 ಮೀಟರ್ ದೂರ ಜಿಗಿದು ಮೂರನೇ ಸ್ಥಾನ ಪಡೆದರು. ಮೊನ್ನೆ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ ನಲ್ಲಿ 16.77 ಮೀಟರ್ ದೂರ ಜಿಗಿದಿದ್ದರು. ಇದಕ್ಕೂ 2014ರಲ್ಲಿ 17.17 ಮೀಟರ್ ದೂರ ಜಿಗಿದಿದ್ದರು.
ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಮತ್ತೊರ್ವ ಅಥ್ಲೀಟ್ ನೀರಜ್ ಚೋಪ್ರ ಜಾವೆಲಿನ್ ಥ್ರೋ ವಿಭಾಗದ ಸೆಮಿಫೈನಲ್ನಲ್ಲಿ 16.59 ಮೀಟರ್ ದೂರ ಎಸೆದು ನಂತರ ಫೈನಲ್ನಲ್ಲಿ 16.33 ಮೀಟರ್ ದೂರ ಎಸೆದು ಆರನೇ ಸ್ಥಾನ ಪಡೆದರು.
ಐಎಎಫ್ ಕಾಂಟಿನೆಂಟಲ್ ಕಪ್ನಲ್ಲಿ ಯೂರೋಪ್, ಅಮೆರಿಕಾ, ಅಫ್ರಿಕಾ ಮತ್ತು ಏಷ್ಯಾ ಪಸಿಫಿಕ್ ರಾಷ್ಟ್ರಗಳ ಟಾಪ್ ಎರಡು ಅಥ್ಲೀಟ್ಗಳು ಭಾಗವಹಿಸುತ್ತಾರೆ.