ಬೆಂಗಳೂರು, ಸೆ.8- ದ್ವಿಚಕ್ರ ವಾಹನವೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹುಳಿಮಾವು ಸಂಚಾರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗಿನ ಜಾವ ನಡೆದಿದೆ.
ಹುಳಿಮಾವಿನ 47ನೆ ಕ್ರಾಸ್ ಸಹಾರ ಹೋಟೆಲ್ ಬಳಿಯ ನಿವಾಸಿ ಸುರೇಶ್ (30) ಸಾವನ್ನಪ್ಪಿದವರು. ಇವರು ನಿನ್ನೆ ರಾತ್ರಿ 2.15ರ ಸುಮಾರಿಗೆ ತನ್ನ ಹೋಂಡಾ ಆಕ್ಟೀವಾದಲ್ಲಿ ಮನೆಗೆ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸುರೇಶ್ ರಸ್ತೆಗೆ ಬಿದ್ದು ತಲೆಗೆ ತೀವ್ರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಹುಳಿಮಾವು ಪೆÇಲೀಸರು ತಿಳಿಸಿದ್ದಾರೆ.