ಲಾಲೂ ಪ್ರಸಾದ್ ಯಾದವ್ ಗೆ ಡಿಪ್ರೆಶನ್

ರಾಂಚಿ: ಮೇವು ಹಗರಣದ ಪ್ರಮುಖ ಅಪರಾಧಿ ಮಾಜಿ ಸಿಎಂ ಹಾಗೂ ಆರ್ ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಖಿನ್ನತೆಯಿಂದ ಬಳಲುತ್ತಿದ್ದು ಅವರಿಗೆ ಮನೋವೈದ್ಯರ ಅವಶ್ಯಕತೆ ಇದೆ ಎಂದು ವೈದ್ಯರು ಹೇಳಿದ್ದಾರೆ.

ಲಾಲೂ ಪ್ರಸಾದ್ ಅವರ ಮಧುಮೇಹ ಪ್ರಮಾಣ ಹಾಗೂ ರಕ್ತದೊತ್ತಡದ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ರಿಮ್ಸ್ ಮುಖ್ಯಸ್ಥ ಆರ್ ಕೆ ಶ್ರೀವತ್ಸ ಹೇಳಿದ್ದಾರೆ, ಕಳೆದ ಶನಿವಾರದಿಂದ ಲಾಲೂ ಪ್ರಸಾಧ್ ಅಸಹಜವಾಗಿ ವರ್ತಿಸತ್ತಿದ್ದಾರೆ, ಅವರನ್ನು ಪರಿಶೀಲಿಸಿದಾಗ ಅವರು ಸಣ್ಣ ಪ್ರಮಾಣದ ಖಿನ್ನತೆಗೊಳಗಾಗಿರುವುದು ತಿಳಿದು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಅವರಿಗೆ ಕಾಲು ಊದಿಕೊಂಡಿದ್ದು, ಸರಿಯಾಗಿ ನಡೆಯಲು ಆಗುತ್ತಿಲ್ಲ, ಸದ್ಯ ಅವರನ್ನು ನೀಗದಲ್ಲಿರಿಸಲಾಗಿದ್ದು, ಮನೋವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುವುದು ಎಂದು ಹೇಳಿದ್ದಾರೆ.

ಲಾಲೂ ಪ್ರಸಾದ್ ಅವರ ಅನಾರೋಗ್ಯ ಸಂಬಂಧ ಎಲ್ಲಾ ವರದಿಗಳನ್ನು ಬಿಸ್ರಾ-ಮುಂಡಾ ಜೈಲಿನ ಮುಖ್ಯಸ್ಥರಿಗೆ ಕಳುಹಿಸಲಾಗಿದೆ. ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ