ರೈತ ಭೇಟಿಗೆ ತೆರಳಿದ್ದ ಯೋಗೇಂದ್ರ ಯಾದವ್‌ ಬಂಧನ

ಮುಂಬೈ: ಅಷ್ಟಪಥ ಹೆದಾರಿ ನಿರ್ಮಾಣ ಪ್ರಸ್ತಾವನೆಯನ್ನು ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ತೆರಳುವ ವೇಳೆ ರಾಜಕಾರಣಿ ಯೋಗೇಂದ್ರ ಯಾದವ್‌ ಅವರನ್ನು ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ರೈತರನ್ನು ಭೇಟಿ ಮಾಡುವುದನ್ನು ಪೊಲೀಸರು ತಡೆದಿದ್ದಾರೆ. ಅಲ್ಲದೆ, ಅವರು ನನ್ನ ಮೇಲೆ ಹಲ್ಲೆ ನಡೆಸಿ, ಪೊಲೀಸ್‌ ವ್ಯಾನ್‌ಗೆ ತಳ್ಳಿದ್ದಾರೆ ಎಂದು ಆರೋಪಿಸಿದ್ದಾರೆ.

ಅಷ್ಟಪಥ ಹೆದ್ದಾರಿ ನಿರ್ಮಾಣ ಪ್ರಸ್ತಾವನೆಯನ್ನು ವಿರೋಧಿಸಿ ನಡೆಯುತ್ತಿರುವ ಚಳವಳಿಗೆ ಸಿಕ್ಕಿದ್ದ ಆಮಂತ್ರಣದ ಮೇಲೆ ನಾವು ರೈತನ್ನು ಭೇಟಿ ಮಾಡಲು ಬಂದಿದ್ದೆವು. ಆದರೆ, ಪೊಲೀಸರು ನಮ್ಮನ್ನು ತಡೆದು ನಮ್ಮ ಫೋನ್‌ಗಳನ್ನು ಕೂಡ ಕಿತ್ತುಕೊಂಡು ಪೊಲೀಸ್‌ ವಾಹನಕ್ಕೆ ಹಾಕಿದ್ದಾರೆ. ಎಂದು ಹೇಳಿದ್ದಾರೆ.

ತಿರು ಅಣ್ಣಾಮಲೈನ ಕಲೆಕ್ಟರ್‌ ಎಂ.ಆರ್‌.ಕುಂದಾಸಾಮಿ ಅವರೊಂದಿಗೆ ಅಷ್ಟಪಥ ಹೆದ್ದಾರಿಗಾಗಿ ನಡೆಸುವ ಭೂಸ್ವಾಧೀನ ಮತ್ತು ದೂರುಗಳ ಕುರಿತಂತೆ ಚರ್ಚಿಸಿದ್ದೆ. ಈ ವಿಚಾರದಲ್ಲಿ ಪೊಲೀಸರ ಹಸ್ತಕ್ಷೇಪವನ್ನು ಅವರು ನಿರಾಕರಿಸಿದ್ದರು. ಆದರೆ, ಅದಾದ ಒಂದೇ ನಿಮಿಷದಲ್ಲಿ ಪೊಲೀಸರು ನನ್ನನ್ನು ಬಂಧಿಸಿದರು. ಎಸ್‌ಪಿ ಅವರು ರೈತರನ್ನು ಭೇಟಿ ಮಾಡಲು ಅವಕಾಶ ನೀಡಿಲ್ಲ ಎಂದು ತಿಳಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಹದಗೆಡುವ ದೃಷ್ಟಿಯಿಂದಾಗಿ ನನ್ನ ಭೇಟಿಯನ್ನು ನಿರಾಕರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ನಾನು ರೈತರನ್ನು ಅವರವರ ಮನೆಗಳಲ್ಲೇ ಭೇಟಿ ಮಾಡುತ್ತೇನೆ ಎಂದು ಹೇಳಿದ್ದೆ. ಹೀಗಿದ್ದರೂ ಅವರು ನನಗೆ ಅನುಮತಿ ನೀಡಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ