ಬಸ್ ವರ್ಲ್ಡ್ ಎಕ್ಸ್ಪೋ ಪ್ರದರ್ಶನ ಯಶಸ್ವಿ

Varta Mitra News

ಬೆಂಗಳೂರು, ಸೆ.7-ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉದ್ಯಾನನಗರಿ ಬೆಂಗಳೂರಿನಲ್ಲಿ ನಡೆದ 8ನೇ ಬಸ್ ವರ್ಲ್ಡ್ ಎಕ್ಸ್ಪೋ ಪ್ರದರ್ಶನ ಯಶಸ್ವಿಯಾಗಿದೆ. ಇದು ಸಿಲಿಕಾನ್ ಸಿಟಿಯಲ್ಲಿ ನಡೆದ ಎರಡನೇ ಪ್ರದರ್ಶನ ಇದಾಗಿದೆ.
ಬಸ್ ಮತ್ತು ಕೋಚ್ ತಯಾರಕರು, ಬಿಡಿಭಾಗಗಳ ಪೂರೈಕೆದಾರರು, ತಂತ್ರಜ್ಞಾನ ಒದಗಿಸುವವರು ಹಾಗೂ ಮಾರುಕಟ್ಟೆ ಡೀಲರ್‍ಗಳನ್ನು ಒಂದೇ ಸೂರಿನಡಿ ಸೇರಿಸುವಲ್ಲಿ ಈ ಪ್ರದರ್ಶನ ಅತ್ಯಂತ ಸಫಲತೆ ಕಂಡಿದೆ.

ಆಗಸ್ಟ್ 29 ರಿಂದ 31ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆದ ಬಸ್ ವರ್ಲ್ಡ್ ಎಕ್ಸ್ಪೋ-2018ನಲ್ಲಿ ವಿವಿಧ ಸಂಸ್ಥೆಗಳು ತನ್ನ ಇತ್ತೀಚಿನ ಉತ್ಪಾದನೆಗಳು, ತಂತ್ರಜ್ಞಾನ, ಸೇವೆಗಳು ಹಾಗೂ ಮಾರ್ಗೋಪಾಯಗಳನ್ನು ಈ ವೇದಿಕೆಯಲ್ಲಿ ಪ್ರದರ್ಶಿಸಿದವು.
ಟೇಪ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಜಿತ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್(ಎಐಪಿಎಲ್) ಸೇರಿದಂತೆ ವಿವಿಧ ಪ್ರತಿಷ್ಠಿತ ಕಂಪನಿಗಳು ಈ ಎಕ್ಸ್ಪೋದಲ್ಲಿ ಭಾಗವಹಿಸಿ ತಮ್ಮ ಹೊಸ ಉತ್ಪನ್ನಗಳು ಮತ್ತು ತಂತ್ರಜ್ಞಾನವನ್ನು ಸಾದರಪಡಿಸಿದವು. ಎಐಪಿಎಲ್ ಮಳಿಗೆಗೆ ಭೇಟಿ ನೀಡಿದ ಆಟೋಮೋಟಿವ್ ಮತ್ತು ಸಾರಿಗೆ ಉದ್ಯಮದ ಹಲವಾರು ಕಂಪನಿಗಳು ನವೀನ ತಾಂತ್ರಿಕತೆ ಮತ್ತು ಸೇವೆಯನ್ನು ಪ್ರಶಂಸಿಸಿದವು ಎಂದು ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಿತ್ ಗುಪ್ತಾ ತಿಳಿಸಿದ್ದಾರೆ.

ಗುಜರಾತ್‍ನ ಗಾಂಧಿನಗರದಲ್ಲಿ ಈ ಹಿಂದೆ ನಡೆದ ಬಸ್ ವರ್ಲ್ಡ್ ಎಕ್ಸ್ಪೋದಲ್ಲಿ ಎಪಿಐಎಲ್ ಸಂಸ್ಥೆ ಭಾಗವಹಿಸಿತ್ತು. ಬೆಂಗಳೂರಿನಲ್ಲಿ ಎರಡನೇ ಬಾರಿ ನಡೆದ ಈ ಪ್ರದರ್ಶನದಲ್ಲಿ ತಮ್ಮ ಸಂಸ್ಥೆಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತದ ವಿವಿಧ ಆಟೋಮೊಬೈಲ್ ಸಂಸ್ಥೆಗಳು ಮತ್ತು ಉದ್ಯಮಗಳೊಂದಿಗೆ ಸಂಪರ್ಕ ಹೊಂದಲು ಇದು ಸೇತುವೆಯಾಗಿದೆ ಎಂದು ಅಜಿತ್ ಗುಪ್ತಾ ಬಣ್ಣಿಸಿದ್ಧಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ